ಬಜೆಟ್ ಮುಖ್ಯಾಂಶಗಳು

7

ಬಜೆಟ್ ಮುಖ್ಯಾಂಶಗಳು

Published:
Updated:

*19 ಜಿಲ್ಲೆಗಳಲ್ಲಿ ಮಾದರಿ ವಿದ್ಯಾರ್ಥಿನಿಲಯ ಸ್ಥಾಪನೆಗೆ ರೂ 38 ಕೋಟಿ

*ದುರ್ಬಲ ವರ್ಗದ ಕಾರ್ಮಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ, ನುರಿತ ಕೆಲಸಗಾರರಿಗೆ, ಕುಶಲಕರ್ಮಿಗಳಿಗೆ 30,000 ವಾಸದ ಮನೆ

*ಕೃಷಿ ಮಾರುಕಟ್ಟೆಗಳಲ್ಲಿ ತೂಕ ಮಾಡುವವರಿಗೆ ಹಾಗೂ ಹಮಾಲಿಗಳಿಗೆ 10,000 ಮನೆ

*ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಕ್ಕೆ ರೂ 50 ಕೋಟಿ

*1500 ನೇಕಾರರಿಗೆ ತಲಾ 2 ವಿದ್ಯುತ್ ಮಗ್ಗಗಳನ್ನು ಒದಗಿಸಲು ತಲಾ ರೂ 1 ಲಕ್ಷ ಬೆಲೆಯ ವಿದ್ಯುತ್‌ಚಾಲಿತ ಮಗ್ಗಗಳನ್ನು ಖರೀದಿಸಲು ಶೇ.50 ಅನುದಾನ. 15 ಕೋಟಿ ರೂ. ವೆಚ್ಚ

*ವಿಜಾಪುರ ಮತ್ತು ನೆಲಮಂಗಲದಲ್ಲಿ ಎರಡು ಹೊಸ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳ ಸ್ಥಾಪನೆ

*ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ಎರಡು ಬಹು ಕೌಶಲ್ಯ ಅಭಿವೃದ್ದಿ ಕೇಂದ್ರಗಳ ಸ್ಥಾಪನೆಗೆ ರೂ 32 ಕೋಟಿ

*ವಿವಿಧ ಕನ್ನಡ ಮತ್ತು ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ರೂ 25 ಕೋಟಿ

*ಮೈಸೂರಿನಲ್ಲಿ ದಸರಾವನ್ನು ನಾಡ ಹಬ್ಬವಾಗಿ ಆಚರಿಸಲು ರೂ 10 ಕೋಟಿ

*ಬೆಂಗಳೂರಿನ ಸಮೀಪ ಬಸವ ಅಂತರಾಷ್ಟ್ರೀಯ ಕೇಂದ್ರದ ಸ್ಥಾಪನೆಗೆ ರೂ 25 ಕೋಟಿ

*ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಕಲಾ ಭವನ ಸ್ಥಾಪನೆಗೆ ರೂ 10 ಕೋಟಿ

*ಲಂಡನ್‌ನಲ್ಲಿ ಬಸವ ಪುತ್ಥಳಿ ನಿರ್ಮಿಸಲು ರೂ 3 ಕೋಟಿ

*ಎಸ್. ನಿಜಲಿಂಗಪ್ಪ ಸ್ಮಾರಕದ ಸಂಶೋಧನಾ ಕೆಲಸಗಳಿಗೆ ರೂ 5 ಕೋಟಿ

*ಕುವೆಂಪು ಹೆಸರಿನಲ್ಲಿ ಸಾಹಿತಿಗಳ ನೆನಪಿನಂಗಳ ಸ್ಮಾರಕ ಸ್ಥಾಪಿಸಲು ರೂ 5 ಕೋಟಿ

*50 ಗುಣಾತ್ಮಕ ಕನ್ನಡ ಚಲನಚಿತ್ರಗಳಿಗೆ ನೀಡುತ್ತಿರುವ ಪ್ರಶಸ್ತಿಗಳನ್ನು 75 ಚಲನಚಿತ್ರಗಳಿಗೆ ಏರಿಕೆ

*ಗ್ರಾಮ ಸಹಾಯಕರುಗಳ ಮಾಸಿಕ ಗೌರವಧನ ರೂ.3000ರಿಂದ 3500ಕ್ಕೆ ಏರಿಕೆ

*446 ದೇವಸ್ಥಾನಗಳಲ್ಲಿ ವಸತಿ ಮತ್ತು ಮೂಲಸೌಕರ್ಯ ಒದಗಿಸಲು ರೂ.20 ಕೋಟಿ

*ಮೇಲುಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೂ 10 ಕೋಟಿ

*ಬೆಂಗಳೂರು ಮತ್ತು ಧಾರವಾಡದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಭಾರಿ ವಾಹನ ಚಾಲಕರ ತರಬೇತಿ ಶಾಲೆ ಪ್ರಾರಂಭಕ್ಕೆ ರೂ 5 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry