ಬಜೆಟ್ ಲಾಭ ಯಾರಿಗೆ ಎಷ್ಟು?

7

ಬಜೆಟ್ ಲಾಭ ಯಾರಿಗೆ ಎಷ್ಟು?

Published:
Updated:

*ಸಂಧ್ಯಾ ಸುರಕ್ಷಾ, ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿೆ, ನಿಶ್ಯಕ್ತ ವಿಧವಾ ಪಿಂಚಣಿ ಹಾಗೂ ಅಶಕ್ತ ಪಿಂಚಣಿ ಯೋಜನೆಗಳಿಗಾಗಿ ಸರ್ಕಾರವು 2011-12ನೇ ಸಾಲಿನಲ್ಲಿ ರೂ 1,742 ಕೋಟಿ ಹಣ ಒದಗಿಸಿದೆ.

*ಸುಮಾರು 10,450 ಗ್ರಾಮ ಸಹಾಯಕರ ಗೌರವಧನವನ್ನು ರೂ 3,000ಗಳಿಂದ ರೂ 3,500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಏಪ್ರಿಲ್ 1ರಿಂದ  ಜಾರಿಯಾಗಲಿದೆ.

*ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕಾಗಿ ರೂ 30 ಕೋಟಿ ಹಾಗೂ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ರೂ 25 ಕೋಟಿ ಮೀಸಲು ಇಡಲಾಗಿದೆ.

*ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ಮಶಾನ ಹಾಗೂ ಆಧುನಿಕ ವಿದ್ಯುತ್ ಚಿತಾಗಾರ ನಿರ್ಮಿಸಲು ರೂ 60 ಕೋಟಿ.

*ಬೆಳಗಾವಿಯಲ್ಲಿನ ಸುವರ್ಣ ಸೌಧ ನಿರ್ಮಾಣಕ್ಕೆ ರೂ 138 ಕೋಟಿ ಮೀಸಲು. 

*ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ವರ್ಷ ರೂ 2,428 ಕೋಟಿ ಒದಗಿಸಲಾಗಿದೆ.


*ತಾಯಿ ಮತ್ತು ಮಗುವಿನ ಆರೈಕೆ ಯೋಜ ಮುಂದುವರಿಕೆಗೆ ರೂ 86 ಕೋಟಿ  ನಿಗದಿ.

*ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗಗಳಲ್ಲಿ ಆರಂಭವಾಗಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆಗೆ ರೂ 40 ಕೋಟಿ ಮೀಸಲು.

*ಎಚ್‌ಐವಿ ಸೋಂಕು ತಗುಲಿರುವ ಮಕ್ಕಳ ಚಿಕಿತ್ಸೆಗಾಗಿ ರೂ 2 ಕೋಟಿ ಮೀಸಲಿಡುವ ಚಿಂತನೆ ಸರ್ಕಾರದ್ದಾಗಿದೆ.


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry