ಬಟ್ಟೆ ಅಂಗಡಿಗಳ ಮೇಲೆ ಐಟಿ ದಾಳಿ

7

ಬಟ್ಟೆ ಅಂಗಡಿಗಳ ಮೇಲೆ ಐಟಿ ದಾಳಿ

Published:
Updated:

ಧಾರವಾಡ: ನಗರದ ಸುಭಾಷ ರಸ್ತೆ ಹಾಗೂ ಲೈನ್ ಬಜಾರ್‌ನಲ್ಲಿರುವ ಮೆಹತಾ ಕುಟುಂಬಕ್ಕೆ ಸೇರಿದ `ಕಾಂಚನ ಸಿಲ್ಕ್ ಸಾರೀಸ್' ಬಟ್ಟೆ ಅಂಗಡಿಗೆ ಮಂಗಳವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಅಂಗಡಿಯಲ್ಲಿನ ದಾಸ್ತಾನು ಹಾಗೂ ನೀಡಿದ ಲೆಕ್ಕವನ್ನು ಪರಿಶೀಲಿಸಿತು.15 ಅಧಿಕಾರಿಗಳು ನಾಲ್ಕು ತಂಡಗಳಾಗಿ ಏಕಕಾಲಕ್ಕೆ ನಾಲ್ಕು ಅಂಗಡಿಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಅಧಿಕಾರಿಯೊಬ್ಬರು `ಇದು ಸಾಮಾನ್ಯ ಭೇಟಿಯೇ ಹೊರತು ದಾಳಿಯಲ್ಲ. ಅನುಮತಿಗಿಂತ ಹೆಚ್ಚಿನ ಬಟ್ಟೆ ಸಂಗ್ರಹ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದ್ದರೆ ಅಂತಹ ಅಂಗಡಿಗಳ ಮಾಲೀಕರಿಗೆ ದಂಡ ಹಾಕಲಾಗುವುದು. ಹೆಚ್ಚುವರಿ ತೆರಿಗೆಯನ್ನು ಕಟ್ಟಿಸಿಕೊಳ್ಳಲಾಗುವುದು' ಎಂದು ಸ್ಪಷ್ಟನೆ ನೀಡಿದರು.ಎಲೆಕ್ಟ್ರಾನಿಕ್ ಮಾಧ್ಯಮದ ಕ್ಯಾಮೆರಾಮನ್‌ಗಳು ಬಂದ ಕೆಲ ಹೊತ್ತಿನಲ್ಲಿಯೇ ಅಂಗಡಿ ಮಾಲೀಕರು ಅಂಗಡಿಯ ಶಟರ್ ಮುಚ್ಚಿಸಿದ್ದು ಇನ್ನಷ್ಟು ಅನುಮಾನಗಳಿಗೆ ಕಾರಣವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry