ಬಟ್‌ಗೆ ಸರ್ಕಾರದ ಬೆಂಬಲ

ಸೋಮವಾರ, ಜೂಲೈ 22, 2019
27 °C

ಬಟ್‌ಗೆ ಸರ್ಕಾರದ ಬೆಂಬಲ

Published:
Updated:

ಕರಾಚಿ (ಪಿಟಿಐ): ಶಾಹೀದ್ ಅಫ್ರಿದಿಯನ್ನು ನಾಯಕತ್ವದಿಂದ ಕಿತ್ತುಹಾಕುವ ಮುನ್ನವೇ ಸರ್ಕಾರಕ್ಕೆ ಈ ಕುರಿತು ಮಾಹಿತಿಯನ್ನು ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಇಜಾಜ್ ಬಟ್‌ಗೆ ಸರ್ಕಾರದಿಂದ ಬೆಂಬಲವೂ ಸಿಕ್ಕಿತ್ತೆಂದು ಇಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.ಆಲ್‌ರೌಂಡರ್ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಬಟ್ ಈಗ ಕೇಳಿಬರುತ್ತಿರುವ ವಿರೋಧದ ಧ್ವನಿಗೆ ಅಂಜುತ್ತಿಲ್ಲ. ಸರ್ಕಾರದಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರು ತಮ್ಮ ಕ್ರಮಕ್ಕೆ ವಿರುದ್ಧ ಇಲ್ಲವೆನ್ನುವುದೇ ಬಟ್ ನಿರಾತಂಕವಾಗಿರಲು ಕಾರಣ.ಪಿಸಿಬಿಯ ಪ್ರಧಾನ ಪೋಷಕರಾಗಿರುವ ಅಧ್ಯಕ್ಷ ಆಸಿಫ್ ಜರ್ದಾರಿ ಕೂಡ ಅಫ್ರಿದಿ ಪರವಾಗಿ ಮಾತನಾಡುವ ಸಾಧ್ಯತೆ ಕಡಿಮೆ ಎನ್ನುವುದು ಸ್ಪಷ್ಟವಾಗಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.ಈ ನಡುವೆ ಅಫ್ರಿದಿ ತಮ್ಮ ವಿರುದ್ಧ ಪಿಸಿಬಿ ಕೈಗೊಂಡಿರುವ ಕ್ರಮವನ್ನು ಆಕ್ಷೇಪಿಸಿ ಜರ್ದಾರಿ ಅವರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ಮಧ್ಯ ಪ್ರವೇಶ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಕೋರಿಕೊಂಡಿದ್ದಾರೆ. ಜೊತೆಗೆ ಬಟ್ ಆಡಳಿತದಿಂದ ಪಾಕ್ ಕ್ರಿಕೆಟ್‌ಗೆ ಸಾಕಷ್ಟು ಧಕ್ಕೆಯಾಗಿದೆ. ಇನ್ನಷ್ಟು ಅಪಾಯವಾಗದಂತೆ ತಡೆಯಬೇಕೆಂದು ಕೂಡ ಮನವಿ ಮಾಡಿದ್ದಾರೆ. ಆದರೆ ಈ ಅಹವಾಲಿಗೆ ಬೆಲೆ ಸಿಗುವ ಸಾಧ್ಯತೆಯಂತೂ ಇಲ್ಲ.ಕ್ರೀಡಾ ಸಚಿವ ಶೌಕತ್‌ವುಲ್ಲಾ ಅವರು ಅಫ್ರಿದಿ ಪರವಾಗಿ ಧ್ವನಿ ಎತ್ತಿದ್ದಾರೆ. ಆನಂತರದಿಂದ ಈ ಪ್ರಕರಣವು ಸಂಪೂರ್ಣವಾಗಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸರ್ಕಾರದ ಒಳಗೆ ಇರುವ ಕೆಲವರು ಕೂಡ ಆಲ್‌ರೌಂಡರ್‌ಗೆ ಬೆಂಬಲ ನೀಡಿದ್ದಾರೆ. ಆದರೆ ಬಟ್ ಮಾತ್ರ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry