ಬಡವರಿಗೆ ಸಾವಿರ ಮನೆ: ತಹಸೀಲ್ದಾರ್

7

ಬಡವರಿಗೆ ಸಾವಿರ ಮನೆ: ತಹಸೀಲ್ದಾರ್

Published:
Updated:

ಹಾನಗಲ್: `ಪಟ್ಟಣದ ಒಂದೇ ಭಾಗದಲ್ಲಿ ಬಡವರಿಗಾಗಿ 1 ಸಾವಿರ ಮನೆ ನಿರ್ಮಿಸುವ ಚಿಂತನೆ ಹೊಂದಲಾಗಿದ್ದು,  ಪಕ್ಷಬೇಧವಿಲ್ಲದೇ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು' ಎಂದು ಶಾಸಕ ಮನೋಹರ ತಹಸೀಲ್ದಾರ್ ಮನವಿ ಮಾಡಿದರು.ಇಲ್ಲಿನ ಪುರಸಭೆ ಆವರಣದಲ್ಲಿ ಸೋಮವಾರ ನಡೆದ ನಗರೋತ್ಥಾನದ ರೂ.5 ಕೋಟಿ ವೆಚ್ಚದಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.`ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆಯ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದು ವಿಳಂಭವಾಗಿದೆ' ಎಂದ ಶಾಸಕ ಮನೋಹರ್, `ಪಟ್ಟಣಗಳ ಮೂಲಸೌಲಭ್ಯಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆಯ ವ್ಯಯದಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುದಾನಗಳನ್ನು ಬಳಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪುರಸಭೆ ಸದಸ್ಯರು ತಮ್ಮ ವಾರ್ಡ್ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪಟ್ಟಣವನ್ನು ಸಮಸ್ಯೆ ಮುಕ್ತವಾಗಿಸೋಣ' ಎಂದು ಸಲಹೆ ಮಾಡಿದರು.ಪುರಸಭೆ ಮಾಜಿ ಅಧ್ಯಕ್ಷ ವೈ.ಎಫ್.ಕಿತ್ತೂರ ಮಾತನಾಡಿ, `ನಿರಂತರ ಜನ ಸಂಪರ್ಕದಲ್ಲಿದ್ದು, ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ಕರ್ತವ್ಯಪ್ರಜ್ಞೆ ಪುರಸಭೆ ಸದಸ್ಯರಲ್ಲಿ ಇರಬೇಕು. ಕಾನೂನು ಬದ್ಧವಾಗಿ ನಡೆಯುವ ಕಾರ್ಯಗಳ ಮಂಜೂರಾತಿ, ಕಾಮಗಾರಿಗಳ ಅನುಷ್ಠಾನಕ್ಕೆ ಶಾಸಕರಿಗೆ ಸಹಕಾರ ನೀಡುವ ಅವಶ್ಯಕತೆ ಇದೆ' ಎಂದರು.ಪುರಸಭೆ ಸದಸ್ಯರಾದ ಸಂತೋಷ ಸುಣಗಾರ, ಅಶೋಕ ಆರೆಗೊಪ್ಪ, ಮಕ್ಬೂಲ್‌ಅಹ್ಮದ್ ಸರ್ವಿಕೇರಿ, ಲೀಲಾವತಿ ತಳವಾರ, ಸಾರಬಾನ್, ಪಾಪಾಸಾಬ್ ಖೇಣಿ, ತಾಪಂ ಸದಸ್ಯರಾದ ಮಧು ಪಾಣಿಗಟ್ಟಿ, ಕಲ್ಲವೀರಪ್ಪ ಪವಾಡಿ, ಮುಖಂಡರಾದ ಪ್ರೊ.ಸಿ.ಎಸ್.ಬಡಿಗೇರ, ಕೆ.ಎಲ್‌ದೇಶಪಾಂಡೆ, ಆರ್.ಎಸ್.ಪಾಟೀಲ, ಜಿ.ಎಂ.ಮುಲ್ಲಾ, ಮಕ್ಬೂಲ್‌ಅಹ್ಮದ್ ಹುಲಗೂರ, ರವಿಕುಮಾರ ಬೆಲ್ಲದ, ದಾನಪ್ಪ ಗಂಟೇರ, ಎಂ.ಆರ್.ಗುತ್ತಲ, ಮುತ್ತಣ್ಣ ನಾಸಿಕ, ರಾಮಣ್ಣ ಮಾಸನಕಟ್ಟಿ, ಮುಖ್ಯಾಧಿಕಾರಿ ಎಂ. ಎಸ್.ಸೋಮಶೇಖರ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry