ಬಡವರ ಕಾಲೋನಿ ಅಭಿವೃದ್ಧಿಗೆ ಆದ್ಯತೆ;ಶಾಸಕ ಕೃಷ್ಣ ಬೈರೇಗೌಡ ಭರವಸೆ

7

ಬಡವರ ಕಾಲೋನಿ ಅಭಿವೃದ್ಧಿಗೆ ಆದ್ಯತೆ;ಶಾಸಕ ಕೃಷ್ಣ ಬೈರೇಗೌಡ ಭರವಸೆ

Published:
Updated:

ಯಲಹಂಕ: ಚಿಕ್ಕಜಾಲ ಗ್ರಾಮದ ರಂಗಸ್ವಾಮಿ ಕ್ಯಾಂಪ್ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕೃಷ್ಣ ಬೈರೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ರಂಗಸ್ವಾಮಿ ಕ್ಯಾಂಪ್ ಹಾಗೂ ಪಳೇಕಮ್ಮ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡಜನರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ರಂಗಸ್ವಾಮಿ ಕ್ಯಾಂಪಿನ ಕೊನೆಯ ಭಾಗದಲ್ಲಿ ನೀರು ಹರಿಯಲು ಜಾಗವಿಲ್ಲದೆ ಸಮಸ್ಯೆಯಿದ್ದು, ಜಾಗ ಬಿಟ್ಟುಕೊಟ್ಟರೆ ಕೂಡಲೇ ಚರಂಡಿ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ಶಾಸಕರು ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಶುಭಾ ನರಸಿಂಹಮೂರ್ತಿ, ಗ್ರಾ.ಪಂ.ಅಧ್ಯಕ್ಷ ಎಂ. ಮಹೇಶ್, ಮಾಜಿ ಅಧ್ಯಕ್ಷರಾದ ಕೆ.ಶ್ರೀನಿವಾಸಯ್ಯ, ವೆಂಕಟೇಶ್, ರವಿ ಕುಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಉದಯ್‌ಕುಮಾರ್, ನರಸಿಂಹಮೂರ್ತಿ ಮೊದಲಾದವರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry