ಬಡವರ ಪರ ಯೋಜನೆ ಅನುಷ್ಠಾನ: ವಿಳಂಬ ನೀತಿಗೆ ಕೃಷ್ಣಪ್ಪ ಟೀಕೆ

7

ಬಡವರ ಪರ ಯೋಜನೆ ಅನುಷ್ಠಾನ: ವಿಳಂಬ ನೀತಿಗೆ ಕೃಷ್ಣಪ್ಪ ಟೀಕೆ

Published:
Updated:

ಕೃಷ್ಣರಾಜಪುರ: `ಬಡವರ ಪರವಾದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬಿಜೆಪಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ವಿಧವಾ ಹಾಗೂ ವೃದ್ಧಾಪ್ಯ ವೇತನ, ಮಾಸಾಶನ ವಿತರಣೆಯಲ್ಲಿಯೂ ವಿಳಂಬವಾಗಿದೆ' ಎಂದು ಮಾಜಿ ಸಚಿವ ಎ.ಕೃಷ್ಣಪ್ಪ ದೂರಿದರು.ಯುವ ಕಾಂಗ್ರೆಸ್ ಘಟಕ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಈಚೆಗೆ ಏರ್ಪಡಿಸಿದ್ದ ಸಹಾಯಹಸ್ತ ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ತಹಶೀಲ್ದಾರ್ ದಯಾನಂದ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.ವಿಶೇಷ ತಹಶೀಲ್ದಾರ್ ದಯಾನಂದ ಪ್ರತಿಕ್ರಿಯಿಸಿ, `ಜನವರಿ ತಿಂಗಳೊಳಗೆ ಮಾಸಾಶನ ಬಿಡುಗಡೆ ಮಾಡಲಾಗುವುದು.

ಜಾತಿ ಮತ್ತು ಆದಾಯಪತ್ರಗಳನ್ನು ಕಾಲಮಿತಿಯೊಳಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry