ಬಡವರ ಫ್ರಿಡ್ಜ್

7
ಮಾಡಿ ನಲಿ ಸರಣಿ -31

ಬಡವರ ಫ್ರಿಡ್ಜ್

Published:
Updated:

 1) ಬೇಕಾಗುವ ಸಾಮಗ್ರಿ: ಮಣ್ಣಿನ ಗಡಿಗೆ, ಮರಳು, ನೀರು, ತರಕಾರಿ.ವಿಧಾನ

1. ನಿಮ್ಮ ಮನೆಯ ತೋಟದ ಅಂಗಳದಲ್ಲಿ ಒಂದು ತಗ್ಗು ತೋಡಿ.

2. ತಗ್ಗಿನಲ್ಲಿ ಒಂದು ಮಣ್ಣಿನ ಗಡಿಗೆಯನ್ನು ಇಟ್ಟು, ಅದರ ಸುತ್ತಲೂ ಸಾಕಷ್ಟು ಮರಳನ್ನು ಹಾಕಿ.

3. ಮರಳು ಇರುವ ಸ್ಥಳಕ್ಕೆ ಮುಕ್ಕಾಲು ತಂಬಿಗೆ ನೀರು ಹಾಕಿ.

4. ಗಡಿಗೆಯಲ್ಲಿ ತರಕಾರಿಯನ್ನು ಇಟ್ಟು ಅದರ ಬಾಯಿ ಮುಚ್ಚಿ.

5. ಗಡಿಗೆಯ ಹತ್ತಿರ ಸ್ವಲ್ಪ ತರಕಾರಿಯನ್ನು ಹೊರಗೆ ಇಡಿ.2) ಪ್ರಶ್ನೆ 4-5 ದಿವಸಗಳಾದ ನಂತರ ಗಡಿಗೆಯ ಬಾಯಿ ತೆರೆದು ತರಕಾರಿಯನ್ನು ಪರೀಕ್ಷಿಸಿ. ಹೊರಗಿಟ್ಟ ತರಕಾರಿಗಳನ್ನೂ ಪರೀಕ್ಷಿಸಿ. ಏನಾಗಿದೆ? ಏಕೆ?ಉತ್ತರ

ಹೊರಗೆ ಇಟ್ಟ ತರಕಾರಿಯು ಒಣಗಿರುತ್ತದೆ. ಏಕೆಂದರೆ ತರಕಾರಿಯಿಂದ ಬಾಷ್ಪ ವಿಸರ್ಜನೆಯು ಹೆಚ್ಚಿನ ಪ್ರಮಾಣದಲ್ಲಿ ಆಗಿರುತ್ತದೆ. ಗಡಿಗೆಯಲ್ಲಿ ತಾಪಮಾನ ಕಡಿಮೆ ಇರುವುದರಿಂದ ತರಕಾರಿಯು ತಾಜಾ ಆಗಿ ಉಳಿಯುತ್ತದೆ. ಫ್ರಿಡ್ಜ್ ಹೊಂದಿಲ್ಲದವರು ತರಕಾರಿಯನ್ನು ರಕ್ಷಿಸಲು ಇದೊಂದು ಸರಳ ವಿಧಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry