ಬಡವರ ಬಗ್ಗೆ ಕಾಳಜಿ ವಹಿಸಿ

7

ಬಡವರ ಬಗ್ಗೆ ಕಾಳಜಿ ವಹಿಸಿ

Published:
Updated:

ಬಡವರ ಪಾಲಿಗೆ ಪಡಿತರ ಚೀಟಿ ಮರೀಚಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಒಂದೇ ಮನೆಯಲ್ಲಿ  2-3 ಕುಟುಂಬಗಳು ವಾಸಿಸುತ್ತವೆ.ಪಡಿತರ ಚೀಟಿಗಾಗಿ ಅರ್ಜಿ ಹಾಕಲು ಒಂದೇ ಕುಟುಂಬಕ್ಕೆ ಮಾತ್ರ ಅವಕಾಶವಿದೆ. ಉಳಿದ 2-3 ಕುಟುಂಬಗಳು ವಾಸ ಮಾಡುವ ಮನೆಗೆ ವಿದ್ಯುತ್ ಬಿಲ್, ಮನೆ ರಸೀದಿ ಇತ್ಯಾದಿಗಳು ಒಂದೇ ಇರುತ್ತವೆ.

 

ಉಳಿದ ಕುಟುಂಬಗಳು ಅವೇ ಬಿಲ್, ರಸೀದಿ ಬಳಸಿ ಅರ್ಜಿ ಹಾಕಲು ಹೋದರೆ ಗ್ರಾಮ ಪಂಚಾಯ್ತಿ  ಅಧಿಕಾರಿಗಳು ಅರ್ಜಿ ಸ್ವೀಕರಿಸುವುದಿಲ್ಲ. ಬೇರೆ ಬೇರೆ ಮನೆಗಳದೇ ಬೇಕೆಂದು ತಾಕೀತು ಮಾಡುತ್ತಾರೆ. ಇಂತಹ ಕುಟುಂಬಗಳು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರ ಚಿಂತಿಸಬೇಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry