ಮಂಗಳವಾರ, ನವೆಂಬರ್ 19, 2019
22 °C

ಬಡ್ಡಿದರ ಕಡಿತ ಸಾಧ್ಯತೆ ಶೇ80: ನೊಮುರಾ

Published:
Updated:

ನವದೆಹಲಿ(ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮೇ 3ರಂದು ಪ್ರಕಟಿಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರವನ್ನು ಶೇ 0.25ರಷ್ಟು ತಗ್ಗಿಸುವ ಸಾಧ್ಯತೆ ಶೇ  80ರಷ್ಟಿದೆ ಎಂದು ಪ್ರಮುಖ ಷೇರು ದಲ್ಲಾಳಿ ಸಂಸ್ಥೆ `ನೊಮುರಾ' ಹೇಳಿದೆ.ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ(ಡಬ್ಲ್ಯುಪಿಐ) ಮಾರ್ಚ್‌ನಲ್ಲಿ ಮೂರು ವರ್ಷಗಳ ಹಿಂದಿನ ಮಟ್ಟವಾದ ಶೇ 5.96ಕ್ಕೆ ಕುಸಿದಿದೆ. ಇದರಿಂದ ಈ ಬಾರಿ ಬಡ್ಡಿ ದರ ಕಡಿತ ಸಾಧ್ಯತೆ ಹೆಚ್ಚು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಚಿನ್ನದ ಧಾರಣೆ ಗಣನೀಯವಾಗಿ ತಗ್ಗಿದೆ. ಇದರಿಂದ ಚಾಲ್ತಿ ಖಾತೆ ಕೊರತೆ(ಸಿಎಡಿ) ಅಂತರವೂ ಇಳಿಯಲಿದೆ. ಈ ಸಂಗತಿಯನ್ನೂ `ಆರ್‌ಬಿಐ' ಪ್ರಮುಖವಾಗಿ ಪರಿಶೀಲಿಸಲಿದೆ ಎಂದು ನೊಮರಾ ವಿಶ್ಲೇಷಿಸಿದೆ.`ಆರ್‌ಬಿಐ' ಮಾ. 18ರಂದು ಪ್ರಕಟಿಸಿದ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿ ದರವನ್ನು ಶೇ 7.50ರಿಂದ ಶೇ 7.25ಕ್ಕೆ ತಗ್ಗಿಸಿತ್ತು.

ಪ್ರತಿಕ್ರಿಯಿಸಿ (+)