ಬಡ್ಡಿ ದರ ಏರಿಕೆ: ಕಾರು ಖರೀದಿ ತುಟ್ಟಿ

7

ಬಡ್ಡಿ ದರ ಏರಿಕೆ: ಕಾರು ಖರೀದಿ ತುಟ್ಟಿ

Published:
Updated:

ನವದೆಹಲಿ (ಪಿಟಿಐ): ಈ ಬಾರಿ ಹಬ್ಬದ ಸಂದರ್ಭದಲ್ಲಿ ಹೊಸ ವಾಹನ­ಗಳನ್ನು ಖರೀದಿಸ­ಬೇಕೆಂದು­­­­ಕೊಂಡಿದ್ದ­ವರಿಗೆ ಆಘಾತ ಕಾದಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೆಪೊ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪೆನಿಗಳು ಶೀಘ್ರದಲ್ಲೇ ಬೆಲೆ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿತದ ಜತೆಗೆ ತಯಾರಿಕಾ ವೆಚ್ಚ ಹೆಚ್ಚಿರುವುದೂ ಬೆಲೆ ಹೆಚ್ಚಿಸ­ಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದು ಭಾರತೀಯ ವಾಹನ ತಯಾ­ರಿಕಾ ಕಂಪೆನಿಗಳ ಒಕ್ಕೂಟ  ಹೇಳಿದೆ.ಹುಂಡೈ ಮೋಟಾರ್ ಮತ್ತು ಜನರಲ್‌ ಮೋಟಾರ್ಸ್‌ ಕಾರುಗಳ ಬೆಲೆಯನ್ನು ಗರಿಷ್ಠ ₨20 ಸಾವಿರದವ­ರೆಗೆ ಹೆಚ್ಚಿಸಲು ನಿರ್ಧರಿಸಿವೆ. ಟಾಟಾ ಮೋಟಾರ್ಸ್‌ ಕೂಡ ಎಲ್ಲ (ಪ್ರಯಾಣಿಕ ಮತ್ತು ವಾಣಿಜ್ಯ ಬಳಕೆ) ಮಾದರಿ ವಾಹನ­ಗಳ ಬೆಲೆ­ಯನ್ನು ಶೇ 11.5ರಷ್ಟು ಹೆಚ್ಚಿಸುವ ಯೋಜನೆ ಹೊಂದಿರುವು­ದಾಗಿ ಹೇಳಿದೆ. ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಮಾತ್ರ ಇನ್ನಷ್ಟು ದಿನ ಕಾದು ನೋಡುವ ತಂತ್ರ ಅನುಸರಿಸುವುದಾಗಿ ಹೇಳಿದೆ.ಹುಂಡೈ ಮೋಟಾರ್‌ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಗ್ರ್ಯಾಂಡ್‌ ಐ–10 ಹೊರತುಪಡಿಸಿ, ಇನ್ನಿತರ ಎಲ್ಲ ಮಾದರಿ ಕಾರುಗಳ ಬೆಲೆಯನ್ನು ಕನಿಷ್ಠ ₨4 ಸಾವಿರದಿಂದ ಗರಿಷ್ಠ ₨20 ಸಾವಿರದವರೆಗೆ ಹೆಚ್ಚಿಸುವು­ದಾಗಿ ಹೇಳಿದೆ. ಜನರಲ್‌ ಮೋಟಾರ್ಸ್‌ ಕಳೆದ ಒಂದು ವರ್ಷದಲ್ಲಿ 3 ಬಾರಿ ಬೆಲೆ ಏರಿಕೆ ಮಾಡಿದೆ. ಇದೀಗ ನಾಲ್ಕನೆಯ ಬಾರಿ ₨2 ಸಾವಿರದಿಂದ ₨10 ಸಾವಿರದ­ವರೆಗೆ ಬೆಲೆ ಹೆಚ್ಚಿಸುವುದಾಗಿ ಹೇಳಿದೆ. ‘ಬೀಟ್‌, ಸೈಲ್, ಮಾದರಿಗಳು ತುಟ್ಟಿ­ಯಾ­ಗುವ ಸಾಧ್ಯತೆಗಳಿವೆ.

 

ಟೊಯೊಟಾ ಕಿರ್ಲೊಸ್ಕರ್‌ ಈಗಾ­ಗಲೇ ಕೆಲವು ಆಯ್ದ ಮಾದರಿ ವಾಹನ­ಗಳ ಬೆಲೆಯನ್ನು ₨24 ಸಾವಿರದವರೆಗೆ ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry