ಬಡ್ತಿಯಲ್ಲಿ ಮೀಸಲು: ಎಸ್ಪಿ ವಿರೋಧ
ನವದೆಹಲಿ (ಪಿಟಿಐ): ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿಯ ಪ್ರಸ್ತಾವನೆಯೇ `ಹಾಸ್ಯಾಸ್ಪದ' ಎಂದು ಸಮಾಜವಾದಿ ಪಕ್ಷ (ಎಸ್ಪಿ) ಹೇಳಿದೆ. ಇದು ಜಾರಿಯಾದರೆ ಮೂವತ್ತು ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿರುವ ಇತರ ವರ್ಗಗಳ ಲಕ್ಷಾಂತರ ನೌಕರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಸಂವಿಧಾನ ತಿದ್ದುಪಡಿ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ತಮ್ಮ ಪಕ್ಷ ವಿರೋಧಿಸುತ್ತದೆ ಎಂದು ಎಸ್ಪಿ ಸಂಸದೆ ಜಯಾ ಬಚ್ಚನ್ ಸುದ್ದಿಗಾರರಿಗೆ ತಿಳಿಸಿದರು.
`ಈ ಮೀಸಲಾತಿ ಅನುಷ್ಠಾನಗೊಂಡರೆ, ಶ್ರಮ ವಹಿಸಿ ಓದಿ ನೌಕರಿ ಪಡೆದವರ ವಿರುದ್ಧ ಮಸೂದೆ ಜಾರಿಗೆ ತಂದಂ ತಾಗುತ್ತದೆ. ದೇಶದಲ್ಲಿ ಒಡಕು ಉಂಟಾ ಗುತ್ತದೆ' ಎಂದು ಅವರು ಹೇಳಿದರು. ಏತನ್ಮಧ್ಯೆ ಲೋಕಜನ ಪಕ್ಷದ ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್, ಈ ಮೀಸಲಾತಿ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಬೆಂಬಲಿಸುವುದಾಗಿ ಹೇಳಿದ್ದಾರೆ. `ಹಿಂದುಳಿದವರ ಕಲ್ಯಾಣದ ಹೆಸರಿನ್ಲ್ಲಲಿ ಅಧಿಕಾರ ಹಿಡಿದಿರುವ ಪಕ್ಷ ಈ ಮಸೂದೆಯನ್ನು ಹೇಗೆ ವಿರೋಧಿಸುತ್ತದೆ' ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.