ಬಡ್ತಿ ಮೀಸಲಾತಿ ಸ್ವಾಗತಾರ್ಹ

7

ಬಡ್ತಿ ಮೀಸಲಾತಿ ಸ್ವಾಗತಾರ್ಹ

Published:
Updated:

ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿ ಪರಿಶಿಷ್ಟ ಜಾತಿ/ ವರ್ಗದ ಸರ್ಕಾರಿ ನೌಕರರಿಗೆ ಹುದ್ದೆಗಳ `ಬಡ್ತಿ~ ಯಲ್ಲಿ ಮೀಸಲಾತಿ ಕಲ್ಪಿಸಲು ಹೊರಟಿರುವುದು ಸ್ವಾಗತಾರ್ಹ, ನ್ಯಾಯ ಸಮ್ಮತ. ಅರ್ಹತೆಯಿದ್ದು ನಾನಾಕಾರಣಗಳಿಂದ (ಜಾತಿ ಕಾರಣವು ಸೇರಿ) ಈ ವರ್ಗದ ನೌಕರರಿಗೆ ಸರ್ಕಾರದ ಇಲಾಖೆಗಳಲ್ಲಿ ಬಡ್ತಿಯನ್ನು ನಿರಾಕರಿಸಲಾಗಿದೆ.

ಶ್ರೇಣಿಕೃತ ಜಾತಿಯುಳ್ಳ ನಮ್ಮ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಈ ವರ್ಗದ ಜನರನ್ನು ಮೇಲೆತ್ತಲು ನೌಕರಿಯ ಬಡ್ತಿಯನ್ನು ಅವಕಾಶ ಮಾಡಿಕೊಡುವುದು ಸಹಾ ಒಂದು ಸರಿಯಾದ ಮಾರ್ಗ. ಸೇವೆಯಲ್ಲಿ ಈ ವರ್ಗದ ಕಿರಿಯರು ಇತರರಿಗಿಂತ ಬೇಗನೆ ಉನ್ನತ ಹುದ್ದೆಗೆ ಏರುತ್ತಾರೆಂದು ಭಾವಿಸಿದರೆ, ಯಾವುದೇ ಸರ್ಕಾರಿ ನೌಕರಿಯ ಅನುಭವವಿಲ್ಲದೆ ನೇರ ಆಯ್ಕೆಯಾದ ಕಿರಿಯ ವ್ಯಕ್ತಿ ಉನ್ನತ ಹುದ್ದೆಗೆ ಬಂದಾಗ ಈ ಪ್ರಶ್ನೆ ಏಕೆ ಉದ್ಭವವಾಗುವುದಿಲ್ಲ? ಅನುಕಂಪಾಧಾರಿತ ಹುದ್ದೆಗಳಿಗೆ ಭರ್ತಿಯಾದಾಗ ದಕ್ಷತೆ ಮತ್ತು ಅದಕ್ಷತೆ ಎಂಬ ವಿಷಯವೇಕೆ ಚರ್ಚೆಯಾಗುವುದಿಲ್ಲ?ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ರವರು ಈ ವರ್ಗಗಳ ಮೀಸಲಾತಿಯನ್ನು ನಿರ್ದಿಷ್ಟ ಅವಧಿಗೆ ಇಚ್ಚಿಸಿದರೂ, ನಮ್ಮ ಜಾತಿ ವ್ಯವಸ್ಥೆಯನ್ನು ಅಷ್ಟೆ ಅವಧಿಯೊಳಗೆ ನಿರ್ಮೂಲನೆ ಆಗಬೇಕೆಂದೂ ಸೂಚಿಸಿದ್ದರು. ಜಾತಿ ವ್ಯವಸ್ಥೆ ಮುಂದುವರಿಯುತ್ತಿರುವುದರಿಂದ ಈ ವರ್ಗಗಳಿಗೆ ಮೀಸಲಾತಿಯನ್ನು ಮುಂದುವರೆಸುವ ಅನಿವಾರ್ಯತೆಯಿದೆ. ಹಿಂದೂ ಧರ್ಮದಲ್ಲಿ ಅಸಮಾನತೆ ಇರುವುದರಿಂದಲೇ ಈ ವ್ಯವಸ್ಥೆಯನ್ನು ಕಲ್ಪಿಸಿರುವುದು.ಮೀಸಲಾತಿಯಲ್ಲಿ ಬರುವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಕೆನೆಪದರ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ವರ್ಷಗಳಿಂದಲೇ ಅಳವಡಿಸಿಯೂ ಆಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry