ಬಡ ಕುಟುಂಬಕ್ಕೆ ಬಡಿದ ಬರಸಿಡಿಲು

7

ಬಡ ಕುಟುಂಬಕ್ಕೆ ಬಡಿದ ಬರಸಿಡಿಲು

Published:
Updated:

ಪಿರಿಯಾಪಟ್ಟಣ: ಬೈಲುಕುಪ್ಪೆ ಬಳಿ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವುದು ಬಡ ಮುಸ್ಲಿಂ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.ಮನೆಯಲ್ಲಿ ತಂದೆ ತೀರಿ ಹೋದ ನಂತರ ಹಿರಿಯ ಮಗನಾಗಿ ಶಫಿಆಹ್ಮದ್  ಜವಾಬ್ದಾರಿ ನಿರ್ವಹಿಸುತ್ತಿದ್ದು, ಆತನ ಪತ್ನಿ ರಮೀಝಾ ಸೇರಿದಂತೆ ಮಕ್ಕಳಾದ ಅಫಾನ, ಇರ್ಫಾನ್, ತಸ್ಮಿಯಾ ಸಹ ಮೃತಪಟ್ಟಿದ್ದು, ಇನ್ನೊಬ್ಬ ಮಗ ಇಮ್ರಾನ್ ಸಹ ತೀವ್ರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.ಶಫಿ  ಸಹೋದರ ರಫೀಕ್ ಆಹ್ಮದ್ ಕೇವಲ ಒಂದು ಒಂದುವರೆ ವರ್ಷದ ಹಿಂದೆ ಸೀಮಾ ಎಂಬಾಕೆಯೊಂದಿಗೆ ವಿವಾಹವಾಗಿದ್ದು ನಾಲ್ಕು ತಿಂಗಳ ಗಂಡು ಮಗುವಿದೆ.ಕುಟಂಬದಲ್ಲಿ ದುಡಿಯುತ್ತಿದ್ದ ಸದಸ್ಯರಾಗಿದ್ದ ಶಫಿ ಮತ್ತು ರಫೀಕ್ ವೃತ್ತಿಯಲ್ಲಿ ಕಾರ್ಪೆಂಟರ್‌ಗಳಾಗಿದ್ದರು.

ರಫೀಕ್ ತಾಯಿಗೆ ಸಾವಿನ ಸುದ್ದಿ ತಿಳಿಸಲು ಸಂಬಂಧಿಕರು ಹಿಂಜರಿಯುತ್ತಿದ್ದು ಕಂಡು ಬಂತು.

ರಫೀಕ್ ಸಾವಿನ ಸುದ್ದಿ ತಿಳಿದ ಪತ್ನಿ ಸೀಮಾ ಆಕ್ರಂದನ ಮನಕಲುವಂತಿತ್ತು.  ಈ ಅಪಘಾತದಲ್ಲಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮೈಸೂರು ಜಿಲ್ಲಾ ಪಂಚಾಯಿತಿ ಕೊಪ್ಪ ಕ್ಷೇತ್ರದ ಮಾಜಿ ಸದಸ್ಯ ಚೌಡಯ್ಯ (52) ಪಿರಿಯಾಪಟ್ಟಣದ ಶಫಿ ಅಹಮ್ಮದ್ (45), ಪತ್ನಿ ರಮೀಜಾ ಬೇಗಂ (38), ಮಕ್ಕಳಾದ ಇರ್ಫಾನ್ (19), ತಸ್ಲೀಮ್ (13) ಅಫ್ಸಾನ್ (4) ಮತ್ತು ಶಫಿ  ಅಹಮ್ಮದ್ ಸಹೋದರ ರಫೀಕ್ (23) ಎಂದು ಗುರುತಿಸಲಾಗಿದೆ. ಚೌಡಯ್ಯ ಒಬ್ಬರೇ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಶಫಿ ಅಹಮ್ಮದ್ ಸುಂಟಿಕೊಪ್ಪದ ಪತ್ನಿ ಮನೆಗೆ ತೆರಳಿ ಕುಟುಂಬ ಸಮೇತರಾಗಿ ಪಿರಿಯಾಪಟ್ಟಣಕ್ಕೆ ಕಾರಿನಲ್ಲಿ ಬರುವಾಗ  ಡಿಕ್ಕಿ ಸಂಭವಿಸಿತು. ಕುಶಾಲನಗರ ಮತ್ತು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗಳಲ್ಲಿ ಶವಗಳನ್ನು ಇರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry