ಶನಿವಾರ, ಜೂನ್ 19, 2021
27 °C

ಬಡ ಕುಟುಂಬಕ್ಕೆ 20 ಲೀ. ಉಚಿತ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಾಜಿನಗರ ವಿಧಾನ­ಸಭಾ ಕ್ಷೇತ್ರದ ದಯಾನಂದನಗರ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮ­ಗಾರಿಗಳ ಉದ್ಘಾಟನೆ, ಬಹುಮಹಡಿ ವಾರ್ಡ್‌ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಕೇಂದ್ರದ ಉದ್ಘಾಟನೆ ಭಾನುವಾರ ನಡೆಯಿತು.ಈ ಸಂದರ್ಭ ಬಿಬಿಎಂಪಿ ಸದಸ್ಯೆ ಶಕೀಲ ಮುನಿರಾಜು ಮಾತನಾಡಿ, ‘ಜನರಿಗೆ ಶುದ್ಧ ನೀರು ಒದಗಿಸುವ ಉದ್ದೇಶ­ದಿಂದ ₨20 ಲಕ್ಷ ವೆಚ್ಚದಲ್ಲಿ ನೀರಿನ ಸಂಸ್ಕರಣಾ ಘಟಕವನ್ನು ಆರಂಭಿ­ಸ­ಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಪ್ರತಿ ಕುಟುಂಬಕ್ಕೆ 20 ಲೀಟರ್‌ ನೀರನ್ನು ಉಚಿತವಾಗಿ ನೀಡಲಾಗು­ವುದು. ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗಿದೆ. ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಈ ಘಟಕದಲ್ಲಿ ನೀರು ದೊರೆಯ­ಲಿದೆ. ಫಲಾನುಭವಿಗಳು ಸ್ಮಾರ್ಟ್ ಬಳಸಿದರೆ ಸ್ವಯಂ ಚಾಲಿತ­ವಾಗಿ ನೀರು ದೊರೆಯುತ್ತದೆ’ ಎಂದರು.‘ಈ ಘಟಕದಿಂದ 1,000 ಕುಟುಂಬ­ಗಳಿಗೆ ಅನುಕೂಲವಾಗಲಿದೆ. ಮುಂದಿನ ಹಂತದಲ್ಲಿ ಮೂರು ಕಡೆ ಘಟಕಗಳನ್ನು ಆರಂಭಿಸಲಾಗುವುದು’ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್‌.ಸುರೇಶ್‌ ಕುಮಾರ್‌, ‘ಬೇಸಿಗೆ­ಯನ್ನು ಗಮನದಲ್ಲಿಟ್ಟುಕೊಂಡು ನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ­ದರು.‘ಕೊಳವೆ ಬಾವಿ ನೀರನ್ನು ಸಂಸ್ಕರಿಸಿ ಶುದ್ಧ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಪ್ಲಾಸ್ಟಿಕ್ ಕ್ಯಾನ್‌ಗಳ ಮೂಲಕ ವಿತರಿಸುವ ಯೋಜನೆ ಇತರ ವಾರ್ಡ್‌ಗಳಿಗೆ ಮಾದರಿ’ ಎಂದರು.ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿ­ಗಳಿಗೆ ಬೈಸಿಕಲ್‌ ವಿತರಣೆ, ವೃದ್ಧಾಪ್ಯ ಹಾಗೂ ಅಂಗವಿಕಲ ವೇತನ­ಗಳನ್ನು ವಿತರಿಸಿದರು. ಕುಟುಂಬದ ಆರೋಗ್ಯ ವೈದ್ಯಕೀಯ ವಿಮಾ ಕಾರ್ಡ್‌ಗಳನ್ನು ವಿತರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.