ಶನಿವಾರ, ಮೇ 8, 2021
26 °C

`ಬಡ ಕುಟುಂಬಗಳಿಗೆ ಶೀಘ್ರ ನಿವೇಶನ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಮನೆಯಿಲ್ಲದೆ ಬೀದಿಪಾಲಾಗಿರುವ ಎಲ್ಲ ಬಡ ಕುಟುಂಬಳಿಗೆ ಶೀಘ್ರವೇ ನಿವೇಶನ ನೀಡಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.ಪಟ್ಟಣದ ಸ್ವರ್ಗಾರೋಹಣ ಮಾತೆಯ ದೇವಾಲಯದಲ್ಲಿ( ಚರ್ಚ್) ಭಾನುವಾರ ಕ್ರೈಸ್ತಬಾಂಧವರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕಳೆದ 15 ವರ್ಷಗಳ ಹಿಂದೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಣದಲ್ಲಿ ಸುಮಾರು 1500 ನಿವೇಶನಗಳನ್ನು ನೀಡುವ ಕ್ರಮಕೈಗೊಂಡಿದ್ದೆ. ಆ ನಂತರದಲ್ಲಿ ಶಾಸಕರಾಗಿ ಬಂದವರು ಬಡವರಿಗೆ ನಿವೇಶನ ನೀಡುವಲ್ಲಿ ಕಾರ್ಯಕ್ರಮ ರೂಪಿಸಿಲ್ಲ. ಆದರೆ ತಾವು ಈ ನಿಟ್ಟಿನಲ್ಲಿ ಗಮನಹರಿಸಿ ನಿವೇಶನ ಹಂಚುವುದಾಗಿ ಭರವಸೆ ನೀಡಿದರು.ಮಾನವೀಯ ಮೌಲ್ಯ: ಧರ್ಮಗಳು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆ ಹೊರತು ಪರಸ್ಪರ ಕತ್ತಿ ಮಸೆಯುವುದಲ್ಲ. ಧರ್ಮ-ಧರ್ಮಗಳ ನಡುವಿನ ಕಲಹದಿಂದಾಗಿ ಮಾನವ ಸಂಕುಲ ನಿರ್ನಾಮವಾಗುತ್ತಿದೆ. ಹಾಗಾಗಿ ಎಲ್ಲ ಧರ್ಮಗಳ ಮುಖಂಡರು ಮಾನವೀಯತೆಗಾಗಿ ತುಡಿಯಬೇಕೆಂದು ಹೇಳಿದರು.

ಚರ್ಚ್‌ನ ಧರ್ಮಗುರು ಫಾದರ್ ಡೇವಿಡ್ ಸಗಾಯ್‌ರಾಜ್ ಅವರು ಶಾಸಕ ಪುಟ್ಟಣ್ಣಯ್ಯ ಅವರಿಗೆ ` ರೈತ ರತ್ನ' ಎಂದು ಬಿರುದು ನೀಡಿ ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಚರ್ಚ್ ಅಭಿವೃದ್ದಿಗೆ ಅಗತ್ಯ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.  ಮುಖಂಡರಾದ ಎಸ್. ಆಲ್ಪರ್ಟ್,  ಸೈಮನ್,  ರೂಬನ್,  ಎಸ್.ಎ. ಅಂತೋಣಿ, ಲಾಜರ್, ಮಾಗ್ರೇಟ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ. ಗೌಡೇಗೌಡ, ರೈತ ಸಂಘದ ಮುಖಂಡರಾದ ಕೆನ್ನಾಳು ನಾಗರಾಜು, ಬಿ.ಟಿ. ಮಂಜುನಾಥ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.