ಗುರುವಾರ , ಜೂನ್ 24, 2021
25 °C

ಬಡ, ರೈತ ವಿರೋಧಿ ಬಜೆಟ್: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಂಡಿಸಿರುವ ಬಜೆಟ್ ಬಡ, ರೈತ, ಕೃಷಿ ಕಾರ್ಮಿಕರ ಪರವಾಗಿರದೇ ಶ್ರೀಮಂತರ ಪರವಾಗಿದೆ ಎಂದು ಮಾಜಿ ಶಾಸಕ ಹಾಗೂ ಸಿಪಿಐ (ಎಂ)ನ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಆರೋಪಿಸಿದರು.ಪಟ್ಟಣದಲ್ಲಿ ಭಾನುವಾರ ಪ್ರಾರಂಭಗೊಂಡ ಸಿಪಿಐ (ಎಂ)ನ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದ ಅಂಗವಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಕೃಷಿ ಬಗ್ಗೆ ತಿಳಿಯದ ಇಬ್ಬರು ರಾಜ್ಯದ ಮುಖ್ಯಮಂತ್ರಿಗಳು ಮಂಡಿಸಿದ ಕೃಷಿ ಬಜೆಟ್‌ನಲ್ಲಿ ರೈತ ಪರವಾಗಿ ಒಂದೂ ವಿಷಯ ಅಡಕವಾಗಿಲ್ಲ. ಅವರು ತಿಳಿದಿರುವ ಹಾಗೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ರೈತರ ಫಲವತ್ತಾದ ಭೂಮಿ ಹಂಚಿಕೆ ಮಾಡುವುದಾಗಿದೆ ಎಂದು  ಅವರು ವ್ಯಂಗ್ಯವಾಡಿದರು. ಬಡಬ ಕುಟುಂಬಗಳಿಗೆ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವ 14 ವಸ್ತುಗಳ ಬೆಲೆ ನೆರೆಯ ರಾಜ್ಯಗಳಿಗಿಂತ ಅಧಿಕಾಗಿವಾಗಿದ್ದರೂ ಕಡಿಮೆ ಮಾಡುವ ಬಗ್ಗೆ ಆಯ-ವ್ಯಯದಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಅಭಿಪ್ರಾಯಪಟ್ಟರು.ಸಿಪಿಐ (ಎಂ.)ನ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್,  ದುರಾಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹೋರಾಟ ನಡೆಸದ ಹೊರತು ಸೌಲಭ್ಯಗಳಿಂದ ವಂಚಿತರಾಗಿರುವ ಬಡ ಜನರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಜಿಲ್ಲಾ ಕಾರ್ಯದರ್ಶಿ ಯು.ಬಸವರಾಜ ಅಧ್ಯಕ್ಷತೆ ವಹಿಸಿದ್ದರು.ಸ್ವಾಗತ ಸಮಿತಿ ಅಧ್ಯಕ್ಷ ಎಸ್.ತಿಪ್ಪನಗೌಡ, ವಿ.ಎಸ್. ಶಿವಶಂಕರ್,ಆರ್.ಎಸ್.ಬಸವರಾಜ, ವಿಶ್ವನಾಥಸ್ವಾಮಿ, ಕೆ.ಗಾದಿಲಿಂಗಪ್ಪ, ಕೆ.ನಾಗರತ್ನಮ್ಮ, ಸತ್ಯಬಾಬು, ತಿಪ್ಪಯ್ಯ, ರಂಗಪ್ಪ ದಾಸರ, ಟಿ.ಖ್ವಾಜಾಸಾಬ್ ಮತ್ತಿತರರು ಉಪಸ್ಥಿತರಿದ್ದರು. ಸಭೆಗೆ ಮುನ್ನ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.    

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.