ಬುಧವಾರ, ಮೇ 19, 2021
24 °C
ಪ್ರಜಾವಾಣಿ ಪರಿಹಾರ ನಿಧಿ

ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ.

ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ.

ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ.

ಆನ್‌ಲೈನ್ ಮೂಲಕ  http://www.careeravenues.in/ dhutility/edurelief.aspx  ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.

ವಿಳಾಸ: ಮ್ಯಾನೇಜರ್, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪರಿಹಾರ ಟ್ರಸ್ಟ್, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001

ಸೂಚನೆ: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.

`ಪ್ರಜಾವಾಣಿ' ಸ್ಕಾಲರ್‌ಶಿಪ್ ಪಡೆದವರ ಅಭಿಮತ

ಪುಸ್ತಕ, ಟ್ಯೂಷನ್ ಶುಲ್ಕಕ್ಕೆ ನೆರವಾಯಿತು

`ಪ್ರಜಾವಾಣಿ' ಬಳಗವು ಕಳೆದ ವರ್ಷ ನನಗೆ ನೀಡಿದ ಪ್ರೋತ್ಸಾಹಧನದಿಂದ ಪ್ರಥಮ ಪಿಯುಸಿಯ (ವಿಜ್ಞಾನ) ಪುಸ್ತಕ ಖರೀದಿಸಿದೆ. ಜತೆಗೆ, ಟ್ಯೂಷನ್ ಶುಲ್ಕವನ್ನೂ ಕಟ್ಟಿದೆ. ಈ ನೆರವಿನಿಂದ ನನ್ನ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಯಿತು. ಅದರ ಫಲವಾಗಿ ಪ್ರಥಮ ಪಿಯುಸಿಯಲ್ಲಿ ಶೇ 84.55ರಷ್ಟು ಫಲಿತಾಂಶ ಸಾಧನೆ ಮಾಡಿದ್ದೇನೆ. ಇದೀಗ ಪಿಯು ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದು, ಈ ಬಾರಿಯೂ ಉತ್ತಮ ಅಂಕಗಳನ್ನು ಗಳಿಸುತ್ತೇನೆ.

-ಶರತ್ ಜೆ. ನರಸಿಂಹ, ಕೇರಾಫ್: ಎನ್. ಜಾನಕಿರಾಮ, ನಂ. 3251, ಬಾಲಾಜಿ ಪವರ್ ಪ್ರೆಸ್, 10ನೇ ಕ್ರಾಸ್, ಬಡಾವಣೆ, ನಂಜನಗೂಡು-571301, ಜಿಲ್ಲೆ: ಮೈಸೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.