ಬಣಗುಡುತ್ತಿರುವ ನಾರಿಹಳ್ಳದ ಪಾತ್ರ

7

ಬಣಗುಡುತ್ತಿರುವ ನಾರಿಹಳ್ಳದ ಪಾತ್ರ

Published:
Updated:
ಬಣಗುಡುತ್ತಿರುವ ನಾರಿಹಳ್ಳದ ಪಾತ್ರ

ಸಂಡೂರು: ಸಂಡೂರು ಹಾಗೂ ದೋಣಿಮಲೈಗಳ ಪ್ರಮುಖ ನೀರಿನ ಮೂಲವಾಗಿರುವ ನಾರಿಹಳ್ಳದ ಪಾತ್ರದಲ್ಲಿ 2010ರಲ್ಲಿ ಉತ್ತಮ ಮಳೆಯಾಗಿದ್ದ ಕಾರಣ, ಅಂದು ನಾರಿಹಳ್ಳ ಉಕ್ಕಿ ಹರಿದಿತ್ತು. ಆದರೆ ಎರಡು ವರ್ಷಗಳಿಂದ ನಾರಿಹಳ್ಳದ ಪಾತ್ರದಲ್ಲಿ ಉತ್ತಮ ಮಳೆಯಾಗದ ಕಾರಣ ಬಣಗುಡುತ್ತಿದೆ.2010ರಲ್ಲಿ ನಾರಿಹಳ್ಳ ಉಕ್ಕಿ ಹರಿದಾಗ ಈ ಭಾಗದ ಜನತೆ ತಂಡೋಪತಂಡವಾಗಿ ಬಂದು ಭೋರ್ಗರೆತವೀಕ್ಷಿಸಿದ್ದರು. ಆದರೆ ಈಗ ಮಳೆ ಇಲ್ಲದೆ ಕೆರೆಕುಂಟೆಗಳು, ತೊರೆಗಳು ಬತ್ತಿ ಬರಡಾಗಿವೆ. ದನಕರುಗಳಿಗೂ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಾರಿಹಳ್ಳ ಜಲಾಶಯವು ತುಂಬಿದರೆ ಸಂಡೂರು ಮತ್ತು ದೋಣಿಮಲೈಗೆ ನೀರಿನ ತೊಂದರೆಯಾಗದು. ಅಲ್ಲದೆ ಅಂತರ್ಜಲ ಮಟ್ಟ ಹೆಚ್ಚುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry