ಶನಿವಾರ, ಜೂನ್ 19, 2021
21 °C

ಬಣ್ಣಗಳ ಹಬ್ಬಕ್ಕೆ ಸಜ್ಜು: ರತಿ–ಮನ್ಮಥರ ಪೂಜೆ

ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ,ಸವರಾಜ ಪಟ್ಟಣಶೆಟ್ಟಿ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಹತ್ತು–ಹಲವು ವಿಶೇ ಷತೆಗಳಿಗೆ ಹೆಸರು ಮಾಡಿರುವ ರೋಣ ತಾಲ್ಲೂಕಿನ ಪ್ರಮುಖ ಪಟ್ಟಣಗಳಲ್ಲಿ ಹೋಳಿ ಹುಣ್ಣಿಮೆ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ರತಿ–ಕಾಮಣ್ಣರಿಗೆ ರಾಜಾತಿಥ್ಯ ದೊರೆತಿದೆ. ತಲೆಮಾರು ಗಳಿಂದಲೂ ಪ್ರತಿಯೊಂದು ಭಾರತೀಯ ಹಬ್ಬ–ಹರಿದಿನಗಳನ್ನು ಜಾತ್ಯಾತೀತ ನಿಲುವಿನೊಂದಿಗೆ ಆಚರಿಸುತ್ತಾ ಬಂದಿರುವ ಕೋಮು ಸೌಹಾರ್ದತೆಯ ನೆಲೆಬೀಡು ರೋಣ ತಾಲ್ಲೂಕಿನ ನಾಗ ರಿಕರು ವರುಷಕ್ಕೊಮ್ಮೆ ಬರುವ ಹೋಳಿ ಹುಣ್ಣಿಮೆಯನ್ನು ವಿಶೇಷ ಆಸಕ್ತಿಯಿಂದ ಆಚರಿಸುತ್ತಾ ಬಂದಿದ್ದಾರೆ.ಹಬ್ಬವನ್ನು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ನಾಗರಿಕರು ಹುಣ್ಣಿಮೆ ದಿನದ ಹಿಂದಿನ ರಾತ್ರಿಯೇ ಕಾಮ ದಹನಕ್ಕೆಂದು ಕದ್ದು ಕೂಡಿ ಹಾಕಿರುವ ಸೌದೆ ರಾಶಿಗೆ ಗ್ರಾಮದ ಗೌಡರ ಮನೆಯಿಂದ ರತಿ–ಕಾಮಣ್ಣರ ಭಾವ ಚಿತ್ರ ಹಾಗೂ ಗ್ರಾಮದ ವಾಲೀಕಾರ ಮನೆಯಿಂದ ಆರತಿಯನ್ನ ಮೆರವಣಿಗೆ ಮೂಲಕ ತಂದು ಸೌದೆ ರಾಶಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಮ ದಹನ ಮಾಡಿ ಹುಣ್ಣಿಮೆ ಆಚ ರಿಸುತ್ತಾರೆ. ಆದರೆ, ಗಜೇಂದ್ರಗಡ, ರೋಣ ಮತ್ತು ನರೇಗಲ್ ನಗರಗಳಲ್ಲಿ ಹುಣ್ಣಿಮೆ ದಿನ ಮಧ್ಯ ರಾತ್ರಿ ಕಾಮ ದಹನ ಮಾಡಿ ಓಕಳಿ ಆಡಿ ಸಂಭ್ರಮಿಸುತ್ತಾರೆ.ಗಜೇಂದ್ರಗಡ ಮಾದರಿಯಲ್ಲಿಯೇ ರೋಣ ಮತ್ತು ನರೇಗಲ್‌ ನಗರಗಳಲ್ಲಿ ಸಾಂಪ್ರದಾಯಿಕ ರತಿ–ಕಾಮಣ್ಣರ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿ ಯಿಂದ ನಮಿಸುತ್ತಿರುವುದು ರೂಢಿ ಇಂದಿನ ಆಧುನಿಕ ಯುಗದಲ್ಲಿಯೂ ಮುಂದು ವರೆದಿರುವುದು ಇಲ್ಲಿನ ನಾಗರಿಕರಿಗೆ ಹಬ್ಬಹರಿದಿನ ಬಗೆಗೆ ಇರುವ ನಂಬಿಕೆ ಹಾಗೂ ಭರವಸೆ ಸಾಕ್ಷೀಕರಿಸುತ್ತಿದೆ.ಕಾಮದಹನದ ಐತಿಹಾಸಿಕ ಹಿನ್ನೆಲೆ: ಶಿವ ತಪಸ್ಸಿನ ಸಮಾಧಿಯಲ್ಲಿದ್ದು ಬಿಟ್ಟಿದ್ದು, ಅವನನ್ನು ಎಬ್ಬಿಸಲು ಒಂದು ಕಾರಣವಿತ್ತು. ತಾರಕಾಸುರನ ವಧೆಗಾಗಿ ಸುಬ್ರಹ್ಮಣ್ಯನ ಜನನವಾಗಬೇಕಿತ್ತು. ಸುಬ್ರಹ್ಮಣ್ಯ ಶಿವನಿಗೆ ಮಗನಾಗಬೇಕು. ತಾರಕನೆಂಬ ದುಷ್ಟ ಶಿವಪುತ್ರನಿಂದ ತನ್ನ ವಧೆಯಾಗುವುದಾದರೆ ಆಗಲಿ ಎಂದು ವರ ಪಡೆದುಕೊಂಡಿದ್ದ ಶಿವನಿಗೆ ಮದು ವೆಯಾಗಿರಲಿಲ್ಲ. ಹೆಂಡತಿ ದಾಕ್ಷಾಯಿಣಿ ದಕ್ಷಯಜ್ಞ ಸಮಯದಲ್ಲಿ ಅವಮಾನಿತ ಳಾಗಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟಿದ್ದಳು.ಶಿವ ತಪೋನಿರತನಾಗಿದ್ದ. ಗಿರಿಜೆ ಶಿವನನ್ನು ವಿವಾಹವಾಗುವ ಮನಸ್ಸು ಮಾಡಿದ್ದಳು. ಆಗ ಇಂದ್ರಾದಿ ದೇವತೆ ಗಳ ಆಪೇಕ್ಷೆಯಂತೆ ರತಿಯ ಪತಿಯಾದ ಮನ್ಮಥ ಅಂದರೆ ಕಾಮದೇವ ರುದ್ರನ ಮನಸ್ಸನ್ನು ಕಲಕಿದ. ಸಿಟ್ಟಿಗೆದ್ದ ಶಿವ ತನ್ನ ಮೂರನೆಯ ಕಣ್ಣು ತೆಗೆಯಲು ಕಾಮ ದೇವ ಸುಟ್ಟು ಬೂದಿಯಾದ. ಕಾಮ ದಹನದ ಸ್ಮೃತಿಗಾಗಿ ಹೋಳಿ ಹಬ್ಬದಂದು ಬೆಂಕಿ ಹಚ್ಚಿ ಸುಡುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.