ಬಣ್ಣದ ಲೋಕಕ್ಕೆ ಬೊಮನ್ ಪುತ್ರ

7

ಬಣ್ಣದ ಲೋಕಕ್ಕೆ ಬೊಮನ್ ಪುತ್ರ

Published:
Updated:
ಬಣ್ಣದ ಲೋಕಕ್ಕೆ ಬೊಮನ್ ಪುತ್ರ

`ಸೋತೇ...ಸೋತೇ... ಜಾಗತೆ... ಬಸ್ ಸೋತೇ~ ಅಂತ ಬೊಮನ್ ಇರಾನಿ ಮಗ ಜಪಿಸುತ್ತಿದ್ದಾನೆ. ಕಾರಣ, ಕರಣ್ ಜೋಹರ್ ತಮ್ಮ ಮುಂದಿನ ಪ್ರಾಜೆಕ್ಟ್ `ಸ್ಟೂಡೆಂಟ್ ಆಫ್ ದ ಇಯರ್~ (ಸೋತೇ) ಚಿತ್ರಕ್ಕೆ ಕಯೋಜ್ ಇರಾನಿ ಅವರನ್ನು ಆಯ್ಕೆ ಮಾಡಿರುವುದಾಗಿ ಟ್ವೀಟಿಸಿದ್ದಾರೆ.ಈ ಹಿಂದೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಕಯೋಜ್‌ಗೆ ಇದೆ. ಇತ್ತೀಚೆಗೆ ಬಿಡುಗಡೆಯಾದ ಕರೀನಾ ಮತ್ತು ಇಮ್ರಾನ್ ಜೋಡಿಯ `ಏಕ್ ಮೈ ಔರ್ ಏಕ್ ತು~ ಚಿತ್ರದ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವೂ ಅವರದ್ದು.

ಬೊಮನ್ ಇರಾನಿಯ ಅತಿ ಪ್ರತಿಭಾನ್ವಿತ ಮಗ ಕಯೋಜ್‌ನನ್ನು `ಸೋತೇ~ಗೆ ಆಯ್ಕೆ ಮಾಡಿರುವ ಕುರಿತು ಟ್ವೀಟಿಸಿ ಅವರ ಚಿತ್ರವನ್ನೂ ಕರಣ್ ಅಪ್‌ಲೋಡ್ ಮಾಡಿದ್ದಾರೆ.ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಮಹೇಶ್ ಭಟ್ ಮಗಳು ಆಲಿಯಾ ಭಟ್, ಡೇವಿಡ್ ಧವನ್ ಮಗ ವರುಣ್ ಧವನ್ ಸಹ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಮೂವರೊಂದಿಗೆ ಮತ್ತೊಬ್ಬ ಸಹಾಯಕ ನಿರ್ದೇಶಕ ಸಿದ್ದಾರ್ಥ್ ಮಲ್ಹೋತ್ರಾ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ಮೈ ನೇಮ್ ಈಸ್ ಖಾನ್~ ಚಿತ್ರಕ್ಕಾಗಿ ಸಿದ್ದಾರ್ಥ್, ಕರಣ್ ಜೋಹರ್‌ನೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.`ಸ್ಟೂಡೆಂಟ್ ಆಫ್ ದ ಇಯರ್~ ತಾರಾಗಣದ ಬಗ್ಗೆ ಮೊದಲ ಸಲ ಕರಣ್ ಅಧಿಕೃತವಾಗಿ ಸಂದೇಶ ರವಾನಿಸಿದ್ದಾರೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry