ಬಣ್ಣ ಬದಲಿಸುವ ಜೀನ್ಸ್

7

ಬಣ್ಣ ಬದಲಿಸುವ ಜೀನ್ಸ್

Published:
Updated:

ಕೆಂಪು ಕಾರ್ಪೆಟ್ ಮೇಲೆ ಕೋಟಂಗಿ ಧರಿಸಿ ನಿಂತಿದ್ದ ವ್ಯಕ್ತಿಯ ಕೈಯಲ್ಲಿದ್ದುದು ಒಂದು ಖಾಲಿ ಪ್ಲಾಸ್ಟಿಕ್... ಥಟ್ಟನೆ ಅದನ್ನು ತಿರುವಿ ಹಾಕಿದರೆ ಅಲ್ಲಿ ಮೂಡಿದ್ದು `ಸ್ಟೀಲ್ ರಾಡ್~...!ಖಾಲಿ ಬಾಕ್ಸ್. ಅದರೊಳಗೆ ಒಂದಷ್ಟು ನೀರು ಹಾಕಿ ಅದನ್ನು ಎರಡು ಬಾರಿ ಗಾಳಿಯಲ್ಲಿ ತೇಲಾಡಿಸಿದರೆ ಆ ಡಬ್ಬದೊಳಗಿಂದ ಇಣುಕಿದ್ದು ಬಣ್ಣ ಬಣ್ಣದ ಕಾಗದಗಳು...!

...ಹೀಗೆ ನೆಲಕ್ಕೆ ಬಿದ್ದ ಎಲ್ಲ ಚೂರುಗಳನ್ನು ಜೋಡಿಸಿದಾಗ ಅವುಗಳ ಮಧ್ಯದಿಂದ ಶ್ವೇತವರ್ಣದ ಪಾರಿವಾಳದ ಪ್ರತ್ಯಕ್ಷ ಹಾರಾಟ. ನೋಡುಗರ ಕಣ್ಣಲ್ಲಿ ಅದೇ ಅಚ್ಚರಿಯ ನೋಟ, ಬೆರುಗುಗಣ್ಣಿನ ಭಾವ.`ಇದೇನು, ಫ್ಯಾಷನ್ ಶೋ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇತ್ತು ಮ್ಯಾಜಿಕ್ ಶೋ ನಡೆಸುತ್ತಿದ್ದಾರಲ್ಲ?~ ಎಂದು ಹುಬ್ಬೇರಿಸುತ್ತಿದ್ದಾಗಲೇ ಕೈಯಲ್ಲಿ ಮೈಕ್ ಹಿಡಿದ ಮಾದಕ ಬೆಡಗಿಯೊಬ್ಬಳು ಹಸನ್ಮುಖಿಯಾಗಿ ವೇದಿಕೆ ಏರಿದಳು. ನೆರೆದಿದ್ದವರ ಕಡೆ ಕೈಬೀಸಿ ಮತ್ತೆ ನಗು ಚೆಲ್ಲಿದಳು.ಅಷ್ಟು ಹೊತ್ತು ಮ್ಯಾಜಿಕ್‌ನೊಂದಿಗೆ ಹಾಸ್ಯಚಟಾಕಿ ಸಿಡಿಸುತ್ತಿದ್ದ ಸುರೇಶ್ ಅವರ ಮ್ಯಾಜಿಕ್ ಮೋಡಿಗೆ ಮನಸೋತಿದ್ದ ಪ್ರೇಕ್ಷಕರು ಅವರ ಬರುವಿಕೆಯ ನಿರೀಕ್ಷೆಯಿಂದ `ಒನ್ಸ್ ಮೋರ್... ಒನ್ಸ್ ಮೋರ್...~ ಎಂದು ಅವರ ಚಾಕಚಕ್ಯತೆಗೆ ಬೇಡಿಕೆ ಸಲ್ಲಿಸಿದರು.ಆ ವೇದಿಕೆ ಸಿದ್ಧವಾಗಿದ್ದು `ಜಲಸ್ 21 ಸಂಸ್ಥೆಯ ಮ್ಯಾಜಿಕ್ ಜೀನ್ಸ್~ ಬಿಡುಗಡೆ ಸಮಾರಂಭಕ್ಕೆ. ದೇಶದಲ್ಲಿ ಮೊದಲ ಬಾರಿಗೆ ಹುಡುಗಿಯರ ಮ್ಯಾಜಿಕ್ ಜೀನ್ಸ್ ಬಿಡುಗಡೆ ಮಾಡಿದ್ದು ಇಂದಿರಾನಗರದ ಸಿ.ಎಂ.ಎಚ್.ರಸ್ತೆಯಲ್ಲಿ ಇರುವ `ಜಲಸ್ 21 ಶೋ ರೂಂ~ನಲ್ಲಿ. ಈ ರಸಕ್ಷಣಕ್ಕೆ `ಜಲಸ್~ ಬ್ರಾಂಡ್‌ನ ವ್ಯವಸ್ಥಾಪಕಿ ಮೋದಿತಾ ತ್ರಿಪಾಠಿ ಸಾಕ್ಷಿಯಾದರು.`ಉಡುಪು ಮಾರುಕಟ್ಟೆಗೆ ಲಗ್ಗೆ ಇಟ್ಟ ದಿನದಿಂದ ಇಂದಿನವರೆಗೆ ಬೇಡಿಕೆ ಉಳಿಸಿಕೊಂಡಿರುವ ದಿರಿಸು ಜೀನ್ಸ್. ಎಲ್ಲ ವರ್ಗದ, ವಯೋಮಾನದ, ವಿವಿಧ ಅಂತಸ್ತಿನವರೆಲ್ಲೂ ಮೆಚ್ಚುವ ಉಡುಗೆ. ಜೀನ್ಸ್ ಖರೀದಿಸುವವರಿಗೆ ಹೆಚ್ಚು ಅವಕಾಶ ಇಲ್ಲ. ಇಲ್ಲಿ ಆಯ್ಕೆ ಸೀಮಿತ.

 

ಬಣ್ಣಗಳ ಹೊರತಾಗಿ ಕಾರ್ಗೊ, ಸ್ಕಿನ್ ಟೈಟ್, ಪೆನ್ಸಿಲ್ ಕಟ್, ಬೆಲ್ ಬಾಟಂ... ಇವು ಹಳೆಯ ಒಂದಷ್ಟು ವಿನ್ಯಾಸಗಳು. ಪ್ರತಿನಿತ್ಯ ಜೀನ್ಸ್ ಧರಿಸುವ ಮಹಿಳೆಯರಿಗೆ ವಿಭಿನ್ನವಾದುದನ್ನು ನೀಡಬೇಕು ಎಂಬ ಇಂಗಿತ ಬಹಳ ದಿನಗಳಿಂದ ಇತ್ತು. ಅದೇ ಯೋಚನೆ ಈ ಮ್ಯಾಜಿಕ್ ಜೀನ್ಸನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆವರೆಗೆ ಬಂದುಬಿಟ್ಟಿತು~ ಎನ್ನುತ್ತಾರೆ ಮೋದಿತಾ.ಪ್ರಸ್ತುತ ಈ ಜೀನ್ಸ್‌ಗಳು ನಾಲ್ಕು ಬಣ್ಣಗಳಲ್ಲಿ ಲಭ್ಯ. ಲ್ಯಾವೆಂಡರ್- ಪಿಂಕ್, ಬ್ಲೂ-ವೈಟ್, ಗ್ರೇ- ಹಾಫ್ ವೈಟ್, ಟರ್ಕೋಂಸ್- ತಿಳಿ ಹಸಿರು ಬಣ್ಣವಾಗಿ ಬದಲಾಗುತ್ತದೆ. ನಮ್ಮ ಗ್ರಾಹಕರಿಗೆ ಹೊಸ ವಿನ್ಯಾಸದ ಉಡುಪು ನೀಡಿ ಅವರನ್ನು ಖುಷಿ ಪಡಿಸುವುದು ನಮ್ಮ ಉದ್ದೇಶ. ಇಂತಹ ಅನೇಕ ಯೋಜನೆಗಳು ನಮ್ಮ ಮುಂದಿವೆ. ಅವುಗಳನ್ನು ಕೂಡ ಗ್ರಾಹಕರ ಮನಸೂರೆಗೊಳ್ಳುವಂತೆ ವಿನ್ಯಾಸಗೊಳಿಸಲಾಗುವುದು.

 

ವಿಜ್ಞಾನದ ಕೆಲವು ಕೈಗಳು ಈ ಕಾರ್ಯದ ಹಿಂದಿವೆ. ವೈಜ್ಞಾನಿಕ ಆಧಾರದ ಮೇಲೆ ಈ ಜೀನ್ಸ್‌ಗಳು ಅವುಗಳ ಬಣ್ಣ ಬದಲಾಯಿಸುತ್ತವೆ. ಅಂತಹ ತಂತ್ರಜ್ಞಾನವನ್ನು ದಿರಿಸಿನಲ್ಲಿ ಅಳವಡಿಸಿಕೊಂಡು ಧರಿಸುವವರಿಗೆ ಖುಷಿ ನೀಡುವ ಉದ್ದೇಶ ನಮ್ಮದು. ದೇಹದ ಬಿಸಿ ತಾಕಿದಂತೆ ಜೀನ್ಸ್‌ನ ಮೂಲ ಬಣ್ಣವೂ ಬದಲಾಗುತ್ತದೆ.ಧರಿಸುವಾಗ ಇದ್ದ ಜೀನ್ಸ್‌ನ ಬಣ್ಣ ಕೆಲವೇ ಹೊತ್ತಿನಲ್ಲಿ ತನ್ನತನವನ್ನು ಬದಲಿಸಿರುತ್ತದೆ. ಈ ತಂತ್ರಜ್ಞಾನ, ಜೀನ್ಸ್ ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದು. ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿರುವ ಈ ಸಂದರ್ಭ ಇವುಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

 

ಪರಿಣಾಮವಾಗಿ ಖರೀದಿಸುವವರು ಎರಡು ಬಣ್ಣಗಳ ಸವಿಯನ್ನೂ ಉಂಡು, ಅನುಭವಿಸಬಹುದು. ಅಂದಹಾಗೆ ಈ ಜೀನ್ಸ್‌ನ ಬೆಲೆ ರೂ 2499~ ಎಂಬುದು ವ್ಯವಸ್ಥಾಪಕಿಯ ವಿವರಣೆ.ಈ ಮಧ್ಯೆ ಮೌಂಟ್ ಕಾರ್ಮೆಲ್ ಕಾಲೇಜಿನ ಬೆಡಗಿಯರು ಬಿಳಿ ಟಿ-ಶರ್ಟ್, ಮ್ಯಾಜಿಕ್ ಜೀನ್ಸ್ ಪ್ಯಾಂಟ್ ಧರಿಸಿ ರ‌್ಯಾಂಪ್ ಮೇಲೆ ಬಳಕುತ್ತಾ ಮುಂದಡಿ ಇಟ್ಟರು. ಧರಿಸಿದ್ದ ಜೀನ್ಸ್ ಬಣ್ಣ ಬದಲಿಸುತ್ತಿದ್ದಂತೆ ಅವರ ಮುಖಭಾವದಲ್ಲೂ ಬದಲಾವಣೆ.

 

ಗಂಭೀರ ವದನೆಯರಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡುತ್ತಿದ್ದ ಅವರು, ತಮ್ಮ ದೇಹದ ಮುಂಭಾಗಕ್ಕೆ ಅದೇ ಕ್ಯಾಮೆರಾ ಬಂದಾಗ ನೀಡುತ್ತಿದ್ದುದು ಬಲವಂತದ `ಪೋಸ್~.ನೀವು ಎಷ್ಟು `ಹಾಟ್~ ಆಗಿರುತ್ತೀರೊ ಅಷ್ಟು ಬೇಗ ನಿಮ್ಮ ಬಣ್ಣ ಅಲ್ಲ... ನಿಮ್ಮ ಜೀನ್ಸ್‌ನ ಬದಲಾಗುತ್ತದೆ ಎಂಬುದು ಮ್ಯಾಜಿಕ್ ಜೀನ್ಸ್‌ನ ಒಟ್ಟಂದ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry