ಶುಕ್ರವಾರ, ಮೇ 7, 2021
19 °C

ಬತ್ತಕ್ಕೆ ಬೆಂಬಲ ಬೆಲೆ ಹೆಚ್ಚಳಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ):  ಉತ್ಪಾದನೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2012-13ನೇ ಹಿಂಗಾರು ಅವಧಿಯಲ್ಲಿನ ಬತ್ತಕ್ಕೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು 1250 ರೂಪಾಯಿಗೆ (ಶೇ. 16ರಷ್ಟು) ಹೆಚ್ಚಿಸಬೇಕು ಎಂದು ಕೃಷಿ ಉತ್ಪನ್ನಗಳ ವೆಚ್ಚ ಮತ್ತು ಬೆಲೆ ನಿಗಾ ಸಮಿತಿ (ಸಿಎಸಿಪಿ) ಗುರುವಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.ಹತ್ತಿಗೂ ನಿಗದಿಪಡಿಸಿರುವ ಬೆಂಬಲ ಬೆಲೆಯನ್ನು ರೂ. 3600ರಿಂದ ರೂ. 3900ರವರೆಗೆ (ಶೇ. 29ರಷ್ಟು) ಹೆಚ್ಚಿಸಬೇಕು ಎಂದು ಸಮಿತಿ ಗಮನ ಸೆಳೆದಿದೆ. ಕಳೆದ ವರ್ಷ ಸರ್ಕಾರ ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ರೂ. 1080 ಮತ್ತು ಹತ್ತಿಗೆ ರೂ. 2800ರಿಂದ 3300ರಷ್ಟು ನಿಗದಿಪಡಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.