ಶನಿವಾರ, ಮೇ 21, 2022
28 °C

ಬತ್ತಕ್ಕೆ ರೂ100 ಬೋನಸ್: ಕೃಷಿ ಇಲಾಖೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೇಶದ ಬತ್ತ ಬೆಳೆಗಾರರಿಗೆ 2012-13ನೇ `ಬೆಳೆ ವರ್ಷ~ದಲ್ಲಿ  `ಬೋನಸ್~ ಸಿಗಲಿದೆ.

ಬತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ಕ್ವಿಂಟಲ್‌ಗೆರೂ100  ಹೆಚ್ಚುವರಿ ಹಣ ನೀಡುವ ಸಂಬಂಧ ಕೃಷಿ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಕ್ವಿಂಟಲ್‌ಗೆರೂ1250 ಬೆಂಬಲ ಬೆಲೆ ಅಲ್ಲದೆರೂ100 ಹೆಚ್ಚುವರಿಯಾಗಿ ನೀಡಬೇಕು ಎಂಬ ಪ್ರಸ್ತಾವನೆಯನ್ನು ಇತ್ತೀಚೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಗೆ ಕಳುಹಿಸಿಕೊಟ್ಟಿದೆ.ಇದಕ್ಕೂ ಮುನ್ನ `ಕೃಷಿ ವೆಚ್ಚ ಮತ್ತು ಬೆಲೆ ನಿಗದಿ ಆಯೋಗ~(ಸಿಎಸಿಪಿ) ಬತ್ತ ಮತ್ತು ಮುಂಗಾರು ಅವಧಿಯ ಬೆಳೆಗಳಿಗೆ `ಕನಿಷ್ಠ ಬೆಂಬಲ ಬೆಲೆ~ ನಿಗದಿ ಪಡಿಸುವ ಸಂಬಂಧ ಮಾಡಿದ್ದ ಶಿಫಾರಸುಗಳನ್ನು ಕೃಷಿ ಸಚಿವಾಲಯಕ್ಕೆ ಸಲ್ಲಿಸಿತ್ತು.ಸಿಎಸಿಪಿ ಬತ್ತಕ್ಕೆರೂ1250 ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿತ್ತು. ಈ ಶಿಫಾರಸನ್ನು ಅಂಗೀಕರಿಸಿದ ಕೃಷಿ ಇಲಾಖೆ, ಕ್ವಿಂಟಲ್ ಬತ್ತಕ್ಕೆ ಹೆಚ್ಚುವರಿಯಾಗಿರೂ100 ಕೊಡಬೇಕು ಎಂಬ ಪ್ರತ್ಯೇಕ ಶಿಫಾರಸನ್ನೂ ಸರ್ಕಾರಕ್ಕೆ ಮಾಡಿದೆ.ಕೃಷಿ ವೆಚ್ಚ ಅಧಿಕವಾಗಿರುವುದರಿಂದ ಬತ್ತಕ್ಕೆ ಹೆಚ್ಚುವರಿ ಹಣ ನೀಡುವುದು ಸೂಕ್ತ ಎನಿಸಿದೆ. ಈ ಬೋನಸ್ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚೆಂದರೆರೂ2621.31 ಕೋಟಿ ಹೊರೆ ಬೀಳಬಹುದು ಎಂದು ಕೃಷಿ ಸಚಿವಾಲಯ ಮೂಲಗಳು ತಿಳಿಸಿವೆ.ಈ ತಿಂಗಳ ನಂತರ ಬತ್ತದ ಬಿತ್ತನೆ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನವೇ ಕನಿಷ್ಠ ಬೆಂಬಲ ಬೆಲೆ ಮತ್ತು ಹೆಚ್ಚುವರಿ ರೂ. 100 ನೀಡುವ ಕುರಿತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೃಷಿ ಸಚಿವಾಲಯ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.