ಬತ್ತಿದ ಕೆರೆಗಳಿಗೆ ನೀರು ಹರಿಸಿ

7

ಬತ್ತಿದ ಕೆರೆಗಳಿಗೆ ನೀರು ಹರಿಸಿ

Published:
Updated:

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿಯ ಸುತ್ತಲಿನ ಸುಮಾರು ಕೆರೆಗಳಿಗೆ ಸರ್ಕಾರದ ನಿಯಮಾನುಸಾರ ಹೇಮಾವತಿ ನಾಲೆಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾರ್ಯಕ್ರಮ ಚಾಲನೆಯಾಗಿ 2 ವರ್ಷಗಳಾಗಿವೆ.

ಕೆಲಸ ಪೂರ್ಣಗೊಂಡಿದ್ದು ಪೈಪುಗಳ ಅಳವಡಿಕೆಯೂ ಕೂಡ ನಡೆದುಹೋಗಿದೆ. ಆದರೆ ಇದುವರೆವಿಗೂ ಕೂಡ ಈ ಭಾಗದ ಯಾವ ಕೆರೆಗೂ ಒಂದು ಹನಿ ನೀರೂ ಬಂದಿಲ್ಲ.ಇದೀಗ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ಹಾಲಿ ಶಾಸಕರು, ಸಂಸದರು, ಮತ್ತು ಮಾಜಿ ಶಾಸಕರುಗಳ ನಡುವಿನ ರಾಜಕೀಯ ಲೆಕ್ಕಾಚಾರದ ಪ್ರತಿಷ್ಠೆಗಳಿಂದ ಕಾಮಗಾರಿ ಮುಗಿದಿದ್ದರೂ ಅನೇಕ ತೊಡಕುಗಳಿಂದಸ್ಥಗಿತಗೊಂಡಿದ್ದು ಸತತ ತೀವ್ರ ಬರಗಾಲದಿಂದ ಕಂಗಾಲಾಗಿರುವ ಇಲ್ಲಿನ ರೈತರ- ಜಾನುವಾರುಗಳ ಕುಡಿಯುವ ನೀರಿನ ಹಾಹಾಕಾರ ಹೇಳತೀರದಾಗಿದೆ ರಾಜಕೀಯ ಮುಖಂಡರು ಸ್ವಪ್ರತಿಷ್ಠೆ ಬಿಟ್ಟು ಜನಸಾಮಾನ್ಯರ ಕಷ್ಟದ ಬಗ್ಗೆ ಗಮನ ಹರಿಸುತ್ತಾರಾ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry