ಶನಿವಾರ, ಮಾರ್ಚ್ 6, 2021
21 °C

ಬತ್ತಿದ ಕೆರೆ: ಕುಡಿಯುವ ನೀರಿನ ತೀರದ ಬವಣೆ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಬತ್ತಿದ ಕೆರೆ: ಕುಡಿಯುವ ನೀರಿನ ತೀರದ ಬವಣೆ

ಹೂವಿನಹಡಗಲಿ: ಬೇಸಿಗೆಯು ಆರಂಭದಲ್ಲೇ ಅನೇಕ ಸಮಸ್ಯೆಗಳನ್ನು ಹೊತ್ತು ತಂದಿದ್ದು, ತಾಲ್ಲೂಕಿನ ಬಹುತೇಕ ಕೆರೆಗಳೆಲ್ಲ ನೀರಿಲ್ಲದೆ ಬರಿದಾಗಿವೆ. ಇದರಿಂದಾಗಿ 35ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.ಕೆಲವು ಹಳ್ಳಿಗಳ ಜನರ ಕುಡಿಯುವ ನೀರಿನ ಸಮಸ್ಯೆಗೆ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ಕಂಡುಕೊಂಡು, ಕೊಳವೆ ಬಾವಿಗಳ ಮೂಲಕ ನೀರು ಕೊಡುವ ಪ್ರಯತ್ನ ನಡೆದಿದೆ. 300 ಅಡಿಗಳಷ್ಟು ಆಳದಲ್ಲಿ ಕೊಳವೆ ಬಾವಿ ಕೊರೆದರೂ ಕೆಲವೆಡೆ ನೀರು ಸಿಗುತ್ತಿಲ್ಲ. ಖಾಸಗಿ ಯಾಗಿ ನೀರನ್ನು ಪಡೆದು ಸರಬರಾಜು ಮಾಡುವ ಪ್ರಕ್ರಿಯೆ ನಡೆದಿವೆ.ತ್ಲ್ಲಾಲೂಕಿನ 77 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅದರಲ್ಲಿ 42 ಗ್ರಾಮಗಳಲ್ಲಿ ನೀರಿನ ಪೂರೈಕೆಗೆ ತೊಂದರೆಯಾಗಿರುವ ಪೈಪ್‌ಲೈನ್ ದುರಸ್ತಿ ಕಾರ್ಯ ಮಾಡುವ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.ಮಿಕ್ಕಂತೆ 35 ಗ್ರಾಮಗಳ ನೀರಿನ ಸಮಸ್ಯೆ ನಿವಾರಣೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಲು ರೂ 20 ಲಕ್ಷ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ, ರೂ 15 ಲಕ್ಷ ಅನುದಾನ ದುರಸ್ತಿ ಕಾರ್ಯಕ್ಕೆ ಬಿಡುಗಡೆ ಯಾಗಿದೆ.ಜಿಲ್ಲಾಧಿಕಾರಿಯವರು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದಕ್ಕಾಗಿ ತಾಲ್ಲೂಕಿಗೆ ರೂ 77.16 ಲಕ್ಷ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಕಾಮಗಾರಿಗಳೂ ಮುಗಿ ಯುವ ಹಂತ ತಲುಪಿವೆ.ಹಳೆಯ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಿ ಪೈಪ್‌ಲೈನ್ ಅಳವಡಿ ಸುವ ಮೂಲಕ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ತಾಲ್ಲೂಕಿನ ಬಾವಿಹಳ್ಳಿ, ಹೊಳ ಗುಂದಿ, ಬಸರಳ್ಳಿ, ಮುದ್ಲಾಪುರ, ತುಂಬಿನಕೇರಿ, ಅಡವಿ ಮಲ್ಲನಕೆರೆ ತಾಂಡಾ, ಕಾಲ್ವಿ, ಬೀರಬ್ಬಿ, ಹ್ಯಾರಡಾ, ದಾಸನಹಳ್ಳಿ, ಬೂದನೂರು, ಕಳಸಾಪುರ ಸೇರಿದಂತೆ 35ಕ್ಕೂ ಹೆಚ್ಚು ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ನೀರಿನ ಜತೆಗೆ ವಿದ್ಯುತ್ ಕಣ್ಣಾಮುಚ್ಚಾಲೆಯೂ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ.ತಾಲ್ಲೂಕಿನ ದೊಡ್ಡ ಮತ್ತು ಸಣ್ಣ ಪ್ರಮಾಣದ ಕೆರೆಗಳಲ್ಲಿ ನೀರು ಬತ್ತಿ ಹೋಗಿ ಅಂತರ್ಜಲ ಕುಸಿಯ ತೊಡಗಿದೆ.

ಮಳೆ ಸುರಿಯದಿದ್ದರೆ ಮೇ ಮತ್ತು ಜೂನ್ ತಿಂಗಳಲ್ಲಿ ಸಮಸ್ಯೆ ಉಲ್ಬಣಗೊಳ್ಳುವ ಮುನ್ಸೂಚನೆ ಕಂಡು ಬಂದಿದೆ.ಬಿಸಿಲಿನ ತಾಪ ಹೆಚ್ಚಾದಂತೆ ನೀರಿನ ಸಮಸ್ಯೆ ಇನ್ನು ಹೆಚ್ಚಾಗುವ ಸಾದ್ಯತೆ ಇದ್ದು, ಜನ- ಜಾನುವಾರುಗಳು ಪರದಾಡುವ ಪರಿಸ್ಥಿತಿ ಬಂದಿದೆ.ತಾಲ್ಲೂಕಿನ ಜೀವನದಿ ತುಂಗಭದ್ರಾ ಬತ್ತಿಹೋಗಿದೆ. ಅಲ್ಲಲ್ಲಿ ರಿಂಗ್ ಒಡ್ಡುಗಳನ್ನು ಹಾಕಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಉಲ್ಬಣಿಸಿದ್ದು, ಸ್ವಲ್ಪ ಪ್ರಮಾಣದಲ್ಲಿ ಮೇವನ್ನು ಸಂಗ್ರಹಿ ಸಿದ್ದರೂ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಜಾನುವಾರುಗಳ ಆಹಾರ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಜಿ.ಪಂ. ಅಧಿಕಾರಿಗಳು ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕೊಳವೆ ಬಾವಿಗಳನ್ನು ಕೊರೆಯಿಸಿ ಹಾಗೂ ಕೆಟ್ಟಿರುವ ಕೊಳವೆ ಬಾವಿಗಳನ್ನು ದುರಸ್ತಿಗೊಳಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುತ್ತಿದ್ದು, ಜನತೆಗೆ ಮಾತ್ರ ಸಮಾಧಾನ ತರುತ್ತಿಲ್ಲ.

 

ದಿನಬಿಟ್ಟು ದಿನ ಈ ಸಮಸ್ಯೆ ಹೆಚ್ಚುತ್ತಲೇ ಇದ್ದು, ಶಾಶ್ವತ ಪರಿಹಾರೋಪಾಯ ಕಂಡು ಕೊಳ್ಳಬೇಕು ಎಂಬುದು ಜನರ ಕೋರಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.