ಬತ್ತಿದ ಸತ್ಯಮಂಗಲ ಕೆರೆ: ನೀರಿಗಾಗಿ ಹಾಹಾಕಾರ

7

ಬತ್ತಿದ ಸತ್ಯಮಂಗಲ ಕೆರೆ: ನೀರಿಗಾಗಿ ಹಾಹಾಕಾರ

Published:
Updated:

ಹಾಸನ: ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಂಡಿರುವ ಸತ್ಯಮಂಗಲದಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ.

ಹಾಸನದಲ್ಲಿ ಈ ವರ್ಷ ಆರು ದಶಕಗಳಿಂದ ಕಂಡರಿಯದಂಥ ಬರಗಾಲ ಬಂದಿದ್ದು, ವಿಶಾಲವಾದ ಸತ್ಯ ಮಂಗಲ ಕೆರೆ ಬಹುತೇಕ ಬತ್ತಿ ಹೋಗಿ ದೆ. ಡಿಸೆಂಬರ್ ಅಂತ್ಯದ ವೇಳೆಗೆ ಈ ಕೆರೆ ಸಂಪೂರ್ಣ ಬತ್ತಿಹೋಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಬರ ಘೋಷಣೆಯಾದ ಬಳಿಕ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 18 ಕೊಳವೆ ಬಾವಿ ತೆಗೆಯಲಾಗಿದೆ. ಅವುಗಳಲ್ಲಿ 14ರಲ್ಲಿ ನೀರು ಬಂದಿಲ್ಲ. ವಿದ್ಯಾನಗರ ಭಾಗದಲ್ಲೇ  ಇರುವ 21 ಕೊಳವೆ ಬಾವಿಗಳಲ್ಲಿ ಎರಡರಲ್ಲಿ ಮಾತ್ರ ನೀರು ಲಭಿಸಿದೆ. ಜನರಿಗೆ ಹತ್ತು ದಿನಗಳಿಗೊಮ್ಮೆ ನೀರು ಪೂರೈಸಲೂ ಸಾಧ್ಯವಾಗುತ್ತಿಲ್ಲ. ಬತ್ತಿ ಹೋಗಿರುವ ಸತ್ಯಮಂಗಲ ಕೆರೆಯೊಳಗೇ ಈಗ ನಾಲ್ಕು ಕೊಳವೆ ಬಾವಿಗಳನ್ನು ತೋಡಲು ಗ್ರಾಮ ಪಂಚಾಯಿತಿ ಮುಂದಾಗಿದೆ.

ಗ್ರಾಮ ಪಂಚಾಯಿತಿ ಒಳಗೆ ನಗರ: ಹಾಸನದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದೆನಿಸಿರುವ ವಿದ್ಯಾನಗರ ಇನ್ನೂ ಸತ್ಯಮಂಗಲ ಗ್ರಾಮ ಪಂಚಾಯಿತಿಗೆಸೇರಿಕೊಂಡಿರುವುದು ಗ್ರಾಮ ಪಂಚಾ ಯಿತಿಗೆ ದೊಡ್ಡ ಸಮಸ್ಯೆ ಯಾಗಿದೆ. ಜನ ವಸತಿಯೇ ವಿರಳವಾಗಿರುವ ಅನೇಕ ಪ್ರದೇಶಗಳು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದರೆ, ಮಗ್ಗುಲಲ್ಲೇ ಇರುವ ವಿದ್ಯಾನಗರ ಗ್ರಾಮ ಪಂಚಾಯಿತಿಗೆ ಸೇರಿದೆ. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಗಣ್ಯರು ಎನಿಸಿಕೊಂಡ ವರು, ಕೆಲವು ರಾಜಕಾರಣಿಗಳು ಇರುವುದು ಈ ಬಡಾವಣೆಯಲ್ಲೇ. ಆದರೆ ಬಡಾವಣೆಯನ್ನು ನಗರಸಭೆಗೆ ಸೇರಿಸುವ ಪ್ರಯತ್ನ ಯಾರೂ ಮಾಡಿಲ್ಲ. ಇದರಿಂದಾಗಿ ಹೇಮಾವತಿ ನದಿಯ ನೀರು ಈ ಭಾಗಕ್ಕೆ ಬಾರದಂತಾಗಿದೆ. ಈ ವರ್ಷದ ಬರಗಾಲ ಜನರ ಧೃತಿಗೆಡಿಸಿದೆ. ಹೇಮಾವತಿ, ಯಗಚಿ ಜಲಾಶಯಗಳ ನೀರಿನ ಕಾಲುವೆಗಳು ಸುತ್ತಮುತ್ತ ಹರಿಯುತ್ತಿದ್ದರೂ ವಿದ್ಯಾನಗರ ಹಾಗೂ ಸತ್ಯಮಂಗಲ ಗ್ರಾಮ ಪಂಚಾಯಿತಿ ಜನರು ಹನಿ ನೀರಿಗಾಗಿ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.ಸತ್ಯಮಂಗಲ ಗ್ರಾಮ ಪಂಚಾಯಿ ತಿಯ ಜನಸಂಖ್ಯೆ ಸುಮಾರು 20 ಸಾವಿರ ದಾಟಿದೆ. ವಿದ್ಯಾನಗರವೊಂದರಲ್ಲೇ ಸುಮಾರು ಮೂರು ಸಾವಿರ ಮನೆಗ ಳಿದ್ದು, ಇರುವ ಮೂರು ಕೊಳವೆ ಬಾವಿ ಗಳಿಂದ ಈ ಎಲ್ಲ ಮನೆಗಳಿಗೆ ನೀರೊದ ಗಿಸಬೇಕಾಗಿದೆ.ವಿದ್ಯಾನಗರ ಭಾಗದಲ್ಲಿ ಈ ವರ್ಷ ನೀರಿಗಾಗಿ ಹೊಡೆದಾಟ ಆಗಬಹುದು ಎಂಬ ಶಂಕೆ ಮೊದಲೇ ಇತ್ತು. ಕೆಲವು ದಿನಗಳ ಹಿಂದೆ ಅದು ನಿಜವಾಗಿದೆ. ನೀರು ಬಿಡಲು ಹಣ ನೀಡುವಂತೆ ಪೀಡಿಸುತ್ತಿದ್ದ ಗ್ರಾಮ ಪಂಚಾಯಿತಿಯ     ವಾ ಲ್ವ್‌ಮೆನ್ ಒಬ್ಬರನ್ನು ಕೆಲವು ದಿನಗಳ ಹಿಂದೆ ಜನರು ಹಿಡಿದು ಥಳಿಸಿದ್ದಾರೆ.ಹಣ ಕೊಟ್ಟವರಿಗೆ ಮಾತ್ರ ನೀರು ಕೊಡುವುದು, ಒಂದೆರಡು ಸಾವಿರ ರೂಪಾಯಿ ನೀಡಿದರೆ ಪರವಾನಿಗೆಯೇ ಇಲ್ಲದೆ ಹೊಸ ವಾಲ್ವ್ ಹಾಕಿಕೊ ಡುವುದು ಮುಂತಾದ ಕೆಲಸ ಮಾಡು ತ್ತಿದ್ದ ವಾಲ್ವ್‌ಮನ್, ಹಣ ನೀಡಲು ನಿರಾಕರಿಸಿದವರಿಗೆ ತಿಂಗಳಿಗೊಮ್ಮೆಯೂ ನೀರು ಬಿಡುತ್ತಿರಲಿಲ್ಲ.ಹೇಮಾವತಿ ನೀರೊಂದೇ ಗತಿ: ಹೇಮಾವತಿ ಜಲಾಶಯದ ನೀರನ್ನು ವಿದ್ಯಾನಗರದವರಿಗೂ ನೀಡುವ ವ್ಯವಸ್ಥೆ ಮಾಡದಿದ್ದಲ್ಲಿ ಈ ವರ್ಷ ಜನರು ದಂಗೆ ಏಳುವ ಸಾಧ್ಯತೆ ಇದೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳಿದ್ದಾರೆ.  ಆದರೆ ಜನಪ್ರತಿನಿಧಿಗಳು ಇದರ್ಲ್ಲಲೂ ರಾಜಕೀಯ ಆರಂಭಿಸಿದ್ದಾರೆ.ಒಂದು ತಿಂಗಳ ಹಿಂದೆ ಹೇಮಾವತಿ ನೀರು ನೀಡುವುದಾಗಿ ಹೇಳಿದ್ದರಿಂದ ಗ್ರಾಮ ಪಂಚಾಯಿತಿಯವರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಪೈಪ್ ಅಳವಡಿಸಿದ್ದರು. ಆದರೆ ಎರಡು ದಿನ ನೀರು ಕೊಟ್ಟ ಬಳಿಕ ನೀರನ್ನು ಬಂದ್ ಮಾಡ ಲಾಗಿದೆ. ವಿದ್ಯಾನಗರಕ್ಕೂ ಹೇಮಾವತಿ ನೀರು ಕೊಡುವ ಬಗ್ಗೆ ಸರ್ಕಾರ ಲಿಖಿತ ಆದೇಶ ನೀಡಬೇಕೆಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry