ಶುಕ್ರವಾರ, ನವೆಂಬರ್ 15, 2019
20 °C

ಬತ್ತಿರುವ ಕೆರೆಗಳಿಗೆ ನೀರು ತುಂಬಿಸಿ

Published:
Updated:

ರಾಜ್ಯದಲ್ಲಿನ ಜಲಾಶಯದಲ್ಲಿ ಪೋಲಾಗುವ ನೀರನ್ನು ಎಲ್ಲಾ ಕೆರೆ ಕಟ್ಟೆಗಳಿಗೆ ತುಂಬಿಸಿ, ಪುಣ್ಯ ಕಟ್ಟಿಕೊಳ್ಳಿ. ಕೇವಲ ರಾಜಕೀಯ ಮಾಡಿ ರಾಜ್ಯದಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಬಂದಿದೆ. ಯಾವುದೇ ರಾಜಕೀಯ ಮಾಡದೆ, ರೈತರು ಮತ್ತು ಜಾನುವಾರುಗಳಿಗೆ ನೀರೊದಗಿಸಲು ಕೆರೆ ಕಟ್ಟೆಗಳನ್ನು ಕೂಡಲೇ ತುಂಬಿಸಬೇಕು.ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಹೋಬಳಿ ವ್ಯಾಪ್ತಿಯ 8 ಹಳ್ಳಿಗಳಲ್ಲಿ 20 ವರ್ಷದಿಂದ ಯಾವ ಕೆರೆ ಕಟ್ಟೆಯಲ್ಲೂ ನೀರಿಲ್ಲ. ಇದರಿಂದ ರೈತರು ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.  ಕುಡಿಯುವ ನೀರಿಗೂ ಬಹಳ ತೊಂದರೆಯಾಗಿದೆ. ಜಾನುವಾರುಗಳಿಗೆ ಮೇವಿಲ್ಲ. ಹೇಮಾವತಿ ಕಾಲುವೆ ಹಾದುಹೋಗಿದೆ. ಏತ ನೀರಾವರಿಗೆ ಕಾಲುವೆ ಮಾಡಿ ಸುಮಾರು 10 ವರ್ಷ ಕಳೆದಿದೆ. ಇನ್ನೂ ನೀರು ಬಿಟ್ಟಿಲ್ಲ. (ಹಳ್ಳಿಗಳು: ಚೌಡೇನಹಳ್ಳಿ, ಕಲ್ಕೆರೆ, ಜಂಬೂರು, ಹತ್ತಿಹಳ್ಳಿ, ತೆಂಕನಹಳ್ಳಿ, ಸಪ್ಪಿನಹಳ್ಳಿ, ದೇವಿಗೆರೆ, ಸಾತೇನಹಳ್ಳಿ....)  ತೆಂಗಿನ ಮರಗಳು ಒಣಗಿವೆ. ಈ ಹಳ್ಳಿಗಳ ಬಗ್ಗೆ ಕೂಡಲೇ ಗಮನಹರಿಸಿ, ಜನ, ಜಾನುವಾರುಗಳ ಸಂಕಷ್ಟ ನಿವಾರಿಸಬೇಕು.

 

ಪ್ರತಿಕ್ರಿಯಿಸಿ (+)