ಶುಕ್ರವಾರ, ಜೂನ್ 25, 2021
29 °C

ಬತ್ತುತ್ತಿರುವ ನೀರು; ರೈತರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆಗಳ ನೀರಿನ ಸಮಸ್ಯೆ ಪರಿಹರಿಸುವುದಾಗಿ ಒಂದೆಡೆ ಸರ್ಕಾರ ಭರವಸೆ ನೀಡುತ್ತಿದ್ದರೆ, ಮತ್ತೊಂದೆಡೆ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟವು ನಡೆ ಯುತ್ತಿದೆ.

 ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬ ಆತಂಕದ ಜೊತೆ ಜೊತೆಗೆ ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗುವ ಭೀತಿಯು ರೈತರಲ್ಲಿ ವ್ಯಕ್ತ ವಾಗುತ್ತಿದೆ.ಇಡೀ ಜಿಲ್ಲೆಯ ಕೃಷಿ ಚಟುವಟಿಕೆಯು ಕೊಳವೆಬಾವಿಗಳ ಮೇಲೆ ಆಧಾರಿತವಾಗಿದ್ದು, ರೈತ ಸಮುದಾಯ ದವರು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.ಜಿಲ್ಲೆಯ ಆರೂ ತಾಲ್ಲೂಕುಗಳ ಕಾಲುವೆಗಳಲ್ಲಿ, ಕೆರೆಗಳಲ್ಲಿ ಮತ್ತ ಬಾವಿಗಳಲ್ಲಿ ಸಾಕಷ್ಟು ಪ್ರಮಾಣ ದಲ್ಲಿ ನೀರಿಲ್ಲದ ಕಾರಣ ಅವು ಕೃಷಿ ಚಟುವಟಿಕೆಗೆ ಪ್ರಯೋಜನ ಕಾರಿ ಯಾಗಿಲ್ಲ.

 

ಏತ ನೀರಾವರಿ ನೀರಿನ ಮೂಲಗಳು ಇಲ್ಲದ ಕಾರಣ ಇಡೀ ಕೃಷಿ ಚಟುವಟಿಕೆಯು ಕೊಳವೆಬಾವಿಗಳನ್ನೇ ಆಧರಿಸಿದೆ. 24 ಗಂಟೆ ನೀರು ಪೂರೈಸುವ ಕೊಳವೆ ಬಾವಿ ಬರಿದಾದರೆ ಸಾಕು, ಕೃಷಿ  ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತದೆ. ರೇಷ್ಮೆ ಮತ್ತು ಹೈನುಗಾರಿಕೆ ಹೊರತು ಪಡಿಸಿ ದರೆ ಇಲ್ಲಿನ ಬಹುತೇಕ ರೈತರು ಬತ್ತ, ರಾಗಿ, ಮೆಕ್ಕೆ ಜೋಳ, ಕಡಲೆ, ತೊಗರಿಬೇಳೆ, ತೋಟ ಗಾರಿಕೆ ಬೆಳೆಗಳು ಸೇರಿದಂತೆ ಆಹಾರ ಮತ್ತು ವಾಣಿಜ್ಯ ಬೆಳೆ ಗಳನ್ನು ಬೆಳೆಯುತ್ತಾರೆ. ವರ್ಷಗಳ ಹಿಂದೆ ಕೊರೆಯಲಾಗಿದ್ದ ಕೊಳವೆಬಾವಿಗಳು ಬತ್ತುತ್ತಿದ್ದು, ರೈತರಲ್ಲಿ ಆತಂಕ ಮೂಡಿದೆ. ಕೃಷಿಗೆ ಸಂಬಂಧಿಸಿ ದಂತೆ ಶಾಶ್ವತ ನೀರಾವರಿ ಯೋಜನೆ ಶೀಘ್ರವೇ ಜಾರಿಯಾಗದಿದ್ದರೆ, ಇಡೀ ಜಿಲ್ಲೆ ಬರಡು ಭೂಮಿಯಾಗಲಿದೆ ಎಂಬ ಭಯ  ಆವರಿಸಿದೆ.`20 ವರ್ಷಗಳ ಹಿಂದೆ ನೀರಾವರಿಯ ಸಮ ಸ್ಯೆಯೇ ಇರಲಿಲ್ಲ. ಕೆರೆ ಮತ್ತು ಬಾವಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಿಗುತ್ತಿದ್ದ ಕಾರಣ ನೀರಿನ ಸಮಸ್ಯೆ ಯಾವತ್ತು ತಲೆದೋರಲಿಲ್ಲ. ಆದರೆ ನೀರಿನ ಅತಿಯಾದ ಬಳಕೆಯಿಂದ ಎಲ್ಲವೂ ಒಂದೊಂದಾಗಿ ಬತ್ತುತ್ತಿದೆ. ಕೊಳವೆಬಾವಿಗಳ ಅತಿಯಾದ ಬಳಕೆಯಿಂದ ಅಂತರ್ಜಲವು ಬತ್ತ ತೊಡಗಿದೆ. 1,500 ಅಡಿಗಳಷ್ಟು ಆಳ ಕೊರೆ ದರೂ ನೀರು ಸಿಗದಿರುವಾಗ ನಾವು ಕೃಷಿಯನ್ನು ಮುಂದುವರೆಸುವುದಾದರೂ ಹೇಗೆ~ ಎಂದು ಅಡವಿಗೊಲ್ಲವಾರಹಳ್ಳಿಯ ರೈತ ಕೃಷ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.`ಕೆರೆಗಳಲ್ಲಿ ಮತ್ತು ಬಾವಿಗಳಲ್ಲಿ ನೀರಿದ್ದ ಕಾರಣ ಹೆಚ್ಚಿನ ಆತಂಕ ಇರಲಿಲ್ಲ. ಆದರೆ ಅವುಗಳು ಬತ್ತು ಹೋಗಿ ಕೊಳವೆಬಾವಿಗಳನ್ನು ಆಶ್ರಯಿಸಿದ್ದರಿಂದ ಇನ್ನಷ್ಟು ಸಮಸ್ಯೆ ಉದ್ಭವಿಸಿದೆ. ಕೊಳವೆ ಬಾವಿಗಳಿಂದ ಕೃಷಿಗೆ ಎಷ್ಟು ನೀರು ಹರಿಸಲು ಸಾಧ್ಯ? ವಿದ್ಯುತ್ ಪೂರೈಕೆ ಕಡಿತಗೊಂಡರಂತೂ ನೀರು ಪೂರೈಸುವುದಂತೂ ಇನ್ನೂ ಕಷ್ಟ. ಕುಡಿ ಯಲಿಕ್ಕೂ ಮತ್ತು ಕೃಷಿ ಚಟುವಟಿಕೆಗೂ ಕೊಳವೆ ಬಾವಿ ನೀರನ್ನೇ ಬಳಸುವುದಾದರೆ, ಇನ್ನೂ ಎಷ್ಟು ವರ್ಷ ಬಳಕೆ ಮಾಡಬಹುದು ಎಂದು ಭಯ ಮೂಡುತ್ತದೆ~ ಎಂದು ಅವರು ಹೇಳಿದರು.`ಜಿಲ್ಲೆಯತ್ತ ನಿರ್ಲಕ್ಷ್ಯ ತೋರದೇ ನೀರಾವರಿಗೆ ಸಂಬಂಧಿಸಿದಂತೆ ಸರ್ಕಾರ ಬೇಗನೇ ಕ್ರಮ ತೆಗೆದುಕೊಂಡರೆ ಅನುಕೂಲವಾಗುತ್ತದೆ. ನದಿ, ಕೆರೆ ಮತ್ತು ಬಾವಿಗಳು ಬತ್ತಿಹೋಗಿದ್ದು, ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳ್ಳದೇ ಬೇರೆ ಯಾವುದೇ ಪರಿಹಾರ ಮಾರ್ಗವಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸಿ, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಜಲಕ್ಷಾಮವು ಎದುರಾಗುತ್ತದೆ~ ಎಂದು ಅವರು ತಿಳಿಸಿದರು.   ಕೊಳವೆ ಬಾವಿಗಳ ಸಂಖ್ಯೆ* ಚಿಕ್ಕಬಳ್ಳಾಪುರ  5213* ಚಿಂತಾಮಣಿ 5796* ಗೌರಿಬಿದನೂರು   14,580* ಶಿಡ್ಲಘಟ್ಟ 5732* ಬಾಗೇಪಲ್ಲಿ  7021* ಗುಡಿಬಂಡೆ  2969* ಒಟ್ಟು  41,311

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.