ಮಂಗಳವಾರ, ಜೂನ್ 15, 2021
21 °C

ಬತ್ತ ಖರೀದಿ ಕೇಂದ್ರಕ್ಕೆ ಬೀಗ: ರೈತರು ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಗೋದಾಮುಗಳ ಕೊರತೆಯ ನೆಪವೊಡ್ಡಿ ಈಚೆಗೆ ತೆರೆಯಲಾಗಿದ್ದ ಬತ್ತ ಖರೀದಿ ಕೇಂದ್ರಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿರುವುದು ರೈತರನ್ನು ಕಂಗೆಡಿಸಿದೆ.ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಟಿಎಪಿಸಿಎಂಎಸ್ ಗೋದಾಮು, ಶಿವಪುರ ಅಣ್ಣೇಗೌಡರ ಕಲ್ಯಾಣ ಮಂಟಪ, ಬೆಸಗರಹಳ್ಳಿಯ ಕಾವೇರಿ ತೂಕದ ಮನೆ ಹಾಗೂ ವಳೆಗೆರೆಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮುಗಳಲ್ಲಿ ತೆರೆಯಲಾಗಿದ್ದ ಬತ್ತ ಖರೀದಿ ಕೇಂದ್ರಗಳನ್ನು ಮುಚ್ಚಲಾಗಿದ್ದು, ಸ್ಥಳಾವಕಾಶ ಇಲ್ಲದ ಕಾರಣ ತಾತ್ಕಾಲಿಕವಾಗಿ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಚೀಟಿಯನ್ನು ಅಂಟಿಸಲಾಗಿದೆ.ತಾಲ್ಲೂಕಿನಲ್ಲಿ ಈ ವರ್ಷ ಬತ್ತ ಫಸಲು ಹೇರಳವಾಗಿದ್ದು, ಸರ್ಕಾರ ಕ್ವಿಂಟಲ್‌ವೊಂದಕ್ಕೆ ರೂ.1080 ಜತೆಗೆ ರೂ.250 ಪ್ರೋತ್ಸಾಹಧನ ಘೋಷಿಸಿದೆ. ಹೀಗಾಗಿ ರೈತರು ಖರೀದಿ ಕೇಂದ್ರಗಳಿಗೆ ಪ್ರತಿನಿತ್ಯ ಎಡತಾಕುತ್ತಿದ್ದು, ಮುಚ್ಚಿರುವ ಕೇಂದ್ರಗಳು ಎಂದು ತೆರೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.ಖರೀದಿ ಕೇಂದ್ರಗಳ ತಾತ್ಕಾಲಿಕ ಸ್ಥಗಿತದ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, `ಬತ್ತ ದಾಸ್ತಾನು ಮಾಡಲು ಗೋದಾಮುಗಳ ಕೊರತೆ ಇರುವುದರಿಂದ ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ~ ಎಂದು ನೀಡುತ್ತಿದ್ದಾರೆ. ಅಧಿಕಾರಿಗಳ ಈ ವರ್ತನೆಯಿಂದಾಗಿ ರೈತರು ಬೆಳೆದ ಬತ್ತವನ್ನು ದಲ್ಲಾಳಿಗಳ ಮೂಲಕ ಖಾಸಗಿ ವರ್ತಕರಿಗೆ ಮಾರಾಟ ಮಾಡುವ ಪರಿಸ್ಥಿತಿ ಒದಗಿದೆ.ಈ ಕೂಡಲೇ ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡು ಬತ್ತ ಖರೀದಿ ಕೇಂದ್ರಗಳನ್ನು ಪುನರ್ ತೆರೆಯುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು ಆಗ್ರಹಿಸಿದ್ದಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.