ಬದಲಾಗುತ್ತೇನೆ...

7

ಬದಲಾಗುತ್ತೇನೆ...

Published:
Updated:

ಬದಲಾಗುತ್ತೇನೆ ಇನ್ನು

ಮುಂದೆ; ಆಗಿರುವ ತಪ್ಪುಗಳನ್ನು

ತಿದ್ದಿಕೊಳ್ಳುತ್ತೇನೆ; ಕ್ಷಮಿಸಿಬಿಡಿ

ಮಕ್ಕಳಿಗೆ, ಅಳಿಯಂದಿರಿಗೆ

ಬೇಕಾಬಿಟ್ಟಿ ಸರ್ಕಾರಿ ಆಸ್ತಿಪಾಸ್ತಿ

ಮಂಜೂರು ಮಾಡುವುದಿಲ್ಲ

ಅವರನ್ನೆಲ್ಲ ಈಗಾಗಲೇ ಮನೆಯಿಂದ

ಹೊರದಬ್ಬಿದ್ದೇನೆ; ಸದ್ಯಕ್ಕೆ

ಜನರು ನನ್ನ ತಪ್ಪುಗಳನ್ನೆಲ್ಲ

ಮರೆಯುವ ತನಕ;

ನೋಡುತ್ತಿರಿ ಇನ್ನು ಮೇಲೆ

ನಾನೇ ಬೇರೆ ನನ್ನ ಸ್ಟೈಲೇ ಬೇರೆ

ಇಷ್ಟಾದರೂ, ಮತ್ತೆ ಮತ್ತೆ

ನನ್ನ ಮೈಮೇಲೆ ಬಿದ್ದರೆ

ಛೂ ಬಿಡುತ್ತೇನೆ

ಕಾವಿದಾರಿಗಳನ್ನು..!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry