ಬದಲಾದ ಪರಿಸ್ಥಿತಿಗೆ ತಕ್ಕಂತೆ ಅರ್ಥೈಸಿ

7

ಬದಲಾದ ಪರಿಸ್ಥಿತಿಗೆ ತಕ್ಕಂತೆ ಅರ್ಥೈಸಿ

Published:
Updated:

ನವದೆಹಲಿ: `ಅಸಮಂಜಸ ಕಾರ್ಮಿಕ ನೀತಿಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ಮಾಡುವ ಆರೋಪವನ್ನು ಯಥಾವತ್ತಾಗಿ ಪರಿಗಣಿಸದೆ ಜಾಗತಿಕರಣ ಮತ್ತು ಉದಾರೀಕರಣ ಹಿನ್ನೆಲೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಬೇಕಾದ ಅಗತ್ಯವಿದೆ~ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.`ಸಂವಿಧಾನದ 14ನೇ ಕಲಂ (ಸಮಾನತೆ ಹಕ್ಕು) ಅನ್ನು ಉಲ್ಲಂಘಿಸುವ ಆಡಳಿತ ಮಂಡಳಿ ಹೆಜ್ಜೆ ಏಕಪಕ್ಷೀಯವಾಗಿದ್ದು, ಸಕಾರಣ ಇಲ್ಲದಿದ್ದರೆ ಮಾತ್ರ ಕಾರ್ಮಿಕ ಸಂಘಟನೆಗಳ ವಾದವನ್ನು ಒಪ್ಪಬಹುದಾಗಿದೆ~ ಎಂದು ನ್ಯಾ.ಡಿ.ಕೆ.ಜೈನ್ ಹಾಗೂ ನ್ಯಾ.ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.ಕಾರ್ಮಿಕ ವಿರೋಧಿ ನಡೆಗಳಲ್ಲಿ ಸಕಾರಣವಲ್ಲದ, ಏಕಪಕ್ಷೀಯವಾದ ಅಂಶಗಳು ಕಂಡುಬರಬೇಕು. ಅಲ್ಲದೆ ಸಂವಿಧಾನದ 14ನೇ ಕಲಂ ಅನ್ವಯ ಗ್ಯಾರಂಟಿಯಾಗಿರುವ ಸಮಾನತೆ ಹಕ್ಕು ಉಲ್ಲಂಘನೆ ಆಗಿರುವುದನ್ನು ಸಾಬೀತುಪಡಿಸಬೇಕೆಂದು ವ್ಯಾಖ್ಯಾನಿಸಿರುವ ಸುಪ್ರೀಂ ಪೀಠ, ಬದಲಾದ ಆರ್ಥಿಕ ವ್ಯವಸ್ಥೆ ಮತ್ತು ಬದಲಾದ ಸಂದರ್ಭಕ್ಕೆ ಅನುಗುಣ ವಾಗಿ ಆರೋಪಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಪ್ರತಿ ಕಲ್ಯಾಣ ರಾಜ್ಯಗಳು ಕೈಗಾರಿಕಾ ಶಾಂತಿ ಹಾಗೂ ಆರ್ಥಿಕ ನ್ಯಾಯವೆಂಬ ಎರಡು ಪರಿಕಲ್ಪನೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೇ ಕಾರ್ಮಿಕ ವಿವಾದ ಇತ್ಯರ್ಥಪಡಿಸುವ ನ್ಯಾಯಾಲಯಗಳು ಮತ್ತು ಶಾಸನಾತ್ಮಕವಾದ ಸ್ವಾಯತ್ತ ಸಂಸ್ಥೆಗಳು ಇದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ನ್ಯಾ. ಗಂಗೂಲಿ ಹೇಳಿದ್ದಾರೆ.ಕಿರಿಯ ದರ್ಜೆ ಕಾರ್ಯನಿರ್ವಾಹಕ ಹುದ್ದೆಗಳನ್ನು ಸೃಷ್ಟಿಸುವ ತನ್ನ ನಿರ್ಧಾರವನ್ನು ರದ್ದುಪಡಿಸಿದ ಕಾರ್ಮಿಕ ನ್ಯಾಯಾಲಯ ಹಾಗೂ ಮುಂಬೈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ `ಸಿಮನ್ಸ್ ಲಿ~. ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದು ಈ ತೀರ್ಪು ನೀಡಿದೆ. ಈ ಹೊಸ ಹುದ್ದೆಗಳಿಗೆ ತನ್ನ ಕಾರ್ಮಿಕರನ್ನೇ ಆಯ್ಕೆ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry