ಬದಲಿ ಮಾರ್ಗ ಸಾಧ್ಯವೆ?

7

ಬದಲಿ ಮಾರ್ಗ ಸಾಧ್ಯವೆ?

Published:
Updated:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜರಾಜೇಶ್ವರಿನಗರ ವಲಯದ ಚೌಡೇಶ್ವರಿನಗರಕ್ಕೆ ಸಿಟಿಮಾರ್ಕೆಟ್‌ನಿಂದ 267, ಮೆಜೆಸ್ಟಿಕ್‌ನಿಂದ 267ಎ, ಶಿವಾಜಿನಗರದಿಂದ 267ಬಿ, ಮಾರ್ಗಗಳ ಸಂಖ್ಯೆಯ ಬಸ್ಸುಗಳು ಚೌಡೇಶ್ವರಿ ನಗರಕ್ಕೆ ಬರುತ್ತಿಲ್ಲ.ಲಗ್ಗೆರೆ ಒಳಗ್ರಾಮದ ಮುಖ್ಯ ರಸ್ತೆಯು ಸುಮಾರು 300 ಅಡಿಗಳಷ್ಟು ಕಿರಿದಾದ ಕಾರಣದಿಂದ ಹಾಗೂ ಲಗ್ಗೆರೆ ಮುಖ್ಯ ರಸ್ತೆಯಲ್ಲಿ ಕಾವೇರಿ 4ನೇ ಹಂತದ ಭಾರಿ ಗಾತ್ರದ ನೀರಿನ ಪೈಪುಗಳನ್ನು ಬೆಂಗಳೂರು ಜಲಮಂಡಳಿಯವರು ಅಳವಡಿಸುತ್ತಿರುವುದರಿಂದ ಕಳೆದ 6 ತಿಂಗಳುಗಳಿಂದ ಈ ಮೇಲಿನ ಮೂರು ಮಾರ್ಗಗಳ ಬಸ್ಸುಗಳು ಚೌಡೇಶ್ವರಿನಗರಕ್ಕೆ ಬರುವುದನ್ನು ನಿಲ್ಲಿಸಿವೆ.ಇತ್ತೀಚಿನ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಬೆನ್ನಮೇಲೆ ಮಣಗಟ್ಟಲೆ ಪುಸ್ತಕಗಳನ್ನು ಹೊತ್ತು 2-3 ಕಿ.ಮೀ. ದೂರ ನಡೆದು ಲಗ್ಗೆರೆ ಹೊರವಲಯದ ಬಸ್ಸು ನಿಲ್ದಾಣಕ್ಕೆ ಬಂದು ಅಲ್ಲಿಂದ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರದ ಕಡೆ ಪ್ರಯಾಣ ಮಾಡಬೇಕಾಗಿದೆ.ಈಗಲಾದರೂ ಬಿಎಂಟಿಸಿ ಸಂಸ್ಥೆ ಸಂಖ್ಯೆ 267 ಚೌಡೇಶ್ವರಿನಗರದಿಂದ ಲಗ್ಗೆರೆ ಸರ್ಕಲ್ ಮಾರ್ಗವಾಗಿ ನೂತನ ಬಸ್ಸು ನಿಲ್ದಾಣದ ಮಾರ್ಗವಾಗಿ ರಿಂಗ್ ರಸ್ತೆಯಲ್ಲಿ ಸಾಗಿ ಮಾಗಡಿ ರಸ್ತೆಯ ಮೂಲಕ ಸಿಟಿಮಾರ್ಕೆಟ್ ತಲುಪುವುದು.

 

267ಎ ಚೌಡೇಶ್ವರಿನಗರದಿಂದ ಹೊರಟು ಲಗ್ಗೆರೆ ಸರ್ಕಲ್ ನೂತನ ಬಸ್ಸು ನಿಲ್ದಾಣದ ಮಾರ್ಗವಾಗಿ ಕಂಠೀರವ ಸರ್ಕಲ್ ಮಹಾಲಕ್ಷ್ಮಿ ಲೇಔಟ್ ಮಾರ್ಗವಾಗಿ ಮೆಜೆಸ್ಟಿಕ್ ತಲುಪುವಂತೆ 267ಬಿ ಚೌಡೇಶ್ವರಿನಗರದಿಂದ ಹೊರಟು ಲಗ್ಗೆರೆ ಸರ್ಕಲ್ ನೂತನ ಬಸ್ಸು ನಿಲ್ದಾಣದ ಮಾರ್ಗವಾಗಿ ಗೊರಗುಂಟೆಪಾಳ್ಯ, ಯಶವಂತಪುರ, ಮಲ್ಲೇಶ್ವರಂ ಮಾರ್ಗವಾಗಿ ಶಿವಾಜಿನಗರ ತಲುಪುವಂತೆ ವ್ಯವಸ್ಥೆಯನ್ನು ಮಾಡಿಕೊಟ್ಟರೆ ಅನುಕೂಳವಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry