ಮಂಗಳವಾರ, ಜೂನ್ 15, 2021
21 °C

ಬದುಕಿಗೆ ಗುರು, ಗುರಿ ಮುಖ್ಯ: ವಲೀಸಾಹೇಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಯಶಸ್ವಿ ಬದುಕಿಗೆ ಗುರಿ ಮತ್ತು ಗುರು ಎರಡೂ ಬೇಕು. ಮನೆಯಲ್ಲಿ ಮಗುವಿಗೆ ತಾಯಿಯೇ ಮೊದಲ ಗುರು. ಮಕ್ಕಳು ತಾಯಿ ಮತ್ತು ಗುರುವನ್ನು ಗೌರವಿಸಬೇಕು. ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬೇ­ಕೆಂದರೆ ಇವರಿಬ್ಬರ ಆಶೀರ್ವಾದ ಅಗತ್ಯ ಎಂದು ಪತ್ರಕರ್ತ ಎಂ.ಎ. ವಲೀಸಾ­ಹೇಬ (ಹಕಿಂಸಾಹೇಬ್) ಹೇಳಿದರು.ಕಿನ್ನಾಳದಲ್ಲಿ ಈಚಗೆ ನಡೆದ   ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾ­ಚರಣೆ ಹಾಗೂ ಸೇವಾ ವಿದ್ಯಾಲಯದ 10ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಕಗ್ಗಲ್ಲನ್ನು ಕೆತ್ತಿ ಮೂರ್ತಿ ಮಾಡುವ ತಾಯಿ ಮತ್ತು ಗುರುವಿನ ಪಾದದಡಿಯಲ್ಲಿ ಸ್ವರ್ಗವಿದೆ. ಇದನ್ನು ಅರಿತು ವಿದ್ಯಾರ್ಥಿಗಳು ಬಾಳಬೇಕು. ಹೀಗಾದಾಗ ಅಸಾಧ್ಯವಾದದ್ದನ್ನೂ ಸಾಧಿಸಬಹುದು ಎಂದು ಹೇಳಿದರು.

ಶರಣಪ್ಪ ಬಾಚಲಾಪೂರ ಮಾತನಾಡಿ, ಸೇವಾ ವಿದ್ಯಾಲಯ­ದಂತಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆ ಜತೆಗೆ ಶಿಸ್ತು ಸಂಯಮ ಮತ್ತು ಬದುಕಿಗೆ ಹಾದಿ ರೂಪಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ ಮಾತನಾಡಿ, ಮೌಲ್ಯಾಧಾರಿತ ಮತ್ತು ಗುಣಾತ್ಮಕ ಶಿಕ್ಷಣ ಇಂದಿನ ಅವಶ್ಯಕತೆ. ಪಾಲಕರಿಗೂ ಇದು ಎಷ್ಟು ಅವಶ್ಯ ಎನ್ನುವುದು ತಿಳಿದಿದೆ. ಗುರುವಾದವನು ಸನ್ಮಾರ್ಗದಲ್ಲಿ ನಡೆಯಬೇಕು. ಶಿಕ್ಷಕರನ್ನು ಮಕ್ಕಳು ಅನುಸರಿಸುತ್ತಾರೆ. ಅತ್ಯುತ್ತಮ ಗುರುವಿನಿಂದ ಕಾಗೆಯೂ ಹಂಸವಾಗಬಲ್ಲದು. ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ರೂಪಿಸಬೇಕು ಎಂದು ಹೇಳಿದರು.ಗುರು ಸಂಸ್ಥೆಯ ಗುರಯ್ಯ ಹಿರೇಮಠ, ಶಿವಪ್ಪ ಜೋಗಿ, ಆರತಿ ತಿಪ್ಪಣ್ಣ,ಶರಣಪ್ಪ ವಡಗೇರಿ ಸಿರಾಜ್ ಬಿಸರಳ್ಳಿ ಉಪಸ್ಥಿತರಿದ್ದರು. ರಾಜ್ಯ ವಕೀಲರ ಪರಿಷತ್‌ ಸದಸ್ಯೆ ಸಂದ್ಯಾ ಮಾದಿನೂರ ಮಾತನಾಡಿದರು.ಸಂಸ್ಥೆಯ ಕಾರ್ಯದರ್ಶಿ ಸೈಯದ್ ಗೌಸ್ ಪಾಶಾ ಪ್ರಾಸ್ತಾವಿಕ ಮಾತನಾ­ಡಿದರು. ಮಹಿಳಾ ದಿನಾಚರಣೆಯ ಕುರಿತು ಶಿಕ್ಷಕಿ ಸೌಮ್ಯಾ ಮಾತನಾಡಿ­ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.