ಬದುಕಿನ ಪುಗ್ಗ

7

ಬದುಕಿನ ಪುಗ್ಗ

Published:
Updated:

ತಾಯ ತೊಡೆ ಮೇಲೆ ಕಂದಮ್ಮ. ಅಮ್ಮನ ಹೊಟ್ಟೆ ಹಸಿದಿದೆ. ಆದರೂ ಪುಗ್ಗಕ್ಕೆ ಗಾಳಿ ತುಂಬಬೇಕು. ತಾನು ಹಡೆದ ಇನ್ನಷ್ಟು ಮಕ್ಕಳು ಅಕ್ಕಪಕ್ಕದಲ್ಲಿ ಆಡಿಕೊಂಡೇ ಹಸಿವು ಮರೆಯುತ್ತಿವೆ. ಪುಗ್ಗದೊಳಗಿನ ಗಾಳಿಗೂ ಬದುಕಿಗೂ ಅವಿನಾಭಾವ ಸಂಬಂಧ.ಗಾಳಿಯೂದಿದಷ್ಟೂ ಪುಗ್ಗಗಳು ಹಾರುತ್ತವೆ. ತುತ್ತಿನಚೀಲಕ್ಕೆ ಅದೇ ದಾರಿ. ಹಾರುವ ಪುಗ್ಗವ ಕಂಡು ಪುಳಕಿತರಾಗುವ ಮಕ್ಕಳೊಂದು ಕಡೆ; ಅದೇ ಪುಗ್ಗಗಳಿಂದ ಅಮ್ಮ ಒಟ್ಟುಮಾಡುವ ಒಂದಿಷ್ಟು ಪುಡಿಗಾಸು ಕಂಡು ಕಣ್ಣರಳಿಸುವ ಕಂದಮ್ಮಗಳು ಇನ್ನೊಂದು ಕಡೆ.ಮಕ್ಕಳಿಗೆ ಇಷ್ಟವಾಗುವ ವಸ್ತುಗಳನ್ನು ಮಾರುತ್ತಾ ತಮ್ಮ ಮಕ್ಕಳ ಭವಿಷ್ಯ ಕಟ್ಟುವ ಮಂದಿ ನಗರದಲ್ಲಿ ಇಷ್ಟೊಂದು ಜನರಿದ್ದಾರಲ್ಲವೇ? ಇವರನ್ನೆಲ್ಲಾ ನೋಡಿದರೆ `ಬದುಕು ಮಾಯೆಯ ಮಾಟ~ ಎಂಬ ಕವಿವಾಣಿ ನೆನಪಾಗದೇ ಇರದು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry