ಬುಧವಾರ, ನವೆಂಬರ್ 20, 2019
24 °C

ಬದುಕು ಕಟ್ಟಿಕೊಟ್ಟ ಹಾಡು-ಬರಹ

Published:
Updated:

ಹೊಳೆಹೊನ್ನುರು: ಪುರಾತನ ಕಾಲದಿಂದಲೂ ಜನರ ಬದುಕನ್ನು ಕಟ್ಟಿ ಕೊಡುವ ಕೆಲಸವನ್ನು ಜನಪದ ಹಾಡುಗಳು ಮಾಡಿವೆ ಎಂದು ಡಾ.ಶ್ರೀಕಂಠ ಕೂಡಿಗೆ ಹೇಳಿದರು.ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ಹಂದರ ಸಾಹಿತ್ಯ ವೇದಿಕೆ, ಪ್ರಥಮದರ್ಜೆ ಕಾಲೇಜು, ಕನ್ನಡ ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.ರಾಜ ಪ್ರಭುತ್ವದ ಮತ್ತು ಧರ್ಮದ ಸಂಕೋಲೆಯಲ್ಲಿ ಕೃತಿ ರಚನೆ ಮಾಡುತ್ತಿದ್ದ ಕಾಲದಲ್ಲಿಯೂ ಸಹ ಹರಿಹರ ಸೇರಿದಂತೆ ವಚನಕಾರರು, ದಾಸರು ಜನ ಬದುಕಬೇಕು ಎನ್ನುವ ದೃಷ್ಟಿಯಿಂದ ಒಂದೊಂದು ಪ್ರದೇಶದಲ್ಲಿ ತನ್ನದೇ ಆದ ವೈವಿಧ್ಯತೆ ಹೊಂದಿರುವ ಈ ನಾಡಿನಲ್ಲಿ ಕ್ರಾಂತಿಕಾರಕ ಜನಪದ ಸಾಹಿತ್ಯ ರಚನೆ ಮಾಡಿ `ಜನ ಬದುಕಲೆಂದು ಹಾಡು- ಬರಹ' ಮಾಡಿದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಮಾತನಾಡಿ, ಜನ ಬದುಕಬೇಕು ಸಮಾಜ ಮುಖಿಯಾಗಿ. ಇಲ್ಲದ್ದಿದರೆ ಜೀವನ ವ್ಯರ್ಥ. ಆದ್ದರಿಂದ, ಟಿ.ವಿ. ನೋಡುವುದನ್ನು ಬಿಟ್ಟು ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಿ. ಆಗ ಜನ ಯಾಕೇ ಬದುಕಬೇಕು ಎನ್ನುವ ವಿಷಯ ಅರಿವಿಗೆ ಬರುತ್ತದೆ ಎಂದರು. ಪಾಂಶುಪಾಲರಾದ ಡಾ.ಜೆ. ಜಯಂತಿ ಅಧ್ಯಕ್ಷತೆ ವಹಿಸಿದ್ದರು.ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ, ಸಾಗರದ ಎಲ್‌ಐಸಿ ಜಯರಾಮ, ನಲ್ಲೂರು ಜೂನಿಯರ್ ಕಾಲೇಜು ಉಪನ್ಯಾಸಕ ಡಾ.ಬಿದರಗೊಡು ನಾಗೇಶ್, ಶಿರಾಳಕೊಪ್ಪ ಕದಂಭ ಕಾಲೇಜಿನ ಉಪನ್ಯಾಸಕ ಡಾ.ರಾಜೇಂದ್ರ, ವಿವಿಧ ವಿಷಯಗಳ ಬಗ್ಗೆ ಹಾಡುತ್ತಾ ಮಾತನಾಡಿದರು. ಡಾ.ಮೇಟಿ ಮಲ್ಲಿಕಾರ್ಜನ ಸಮಾರೋಪ ಭಾಷಣ ಮಾಡಿದರು.ಡಾ.ಕುಂಸಿ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ಎಚ್.ಎನ್. ವಿದ್ಯಾ ಸಂಗಡಿಗರು ಜನಪದ ಗೀತೆ ಹಾಡಿದರು. ಉಪನ್ಯಾಸಕ ಆರ್.ಕೆ. ವಿನಯ್ ಸ್ವಾಗತಿಸಿದರು. ಲೀಲಾವತಿ ವಂದಿಸಿದರು. ಟಿ. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)