ಬದುಕು ರೂಪಿಸಲು ಮಾತೃಭಾಷೆ ಸಹಕಾರಿ: ಘಂಟಿ

7

ಬದುಕು ರೂಪಿಸಲು ಮಾತೃಭಾಷೆ ಸಹಕಾರಿ: ಘಂಟಿ

Published:
Updated:

ಬಾಗಲಕೋಟೆ: ಮನುಷ್ಯನ ಬದುಕನ್ನು ರೂಪಿಸುವುದು ಆತನ ಮಾತೃಭಾಷೆ. ಅದರಿಂದ ಸಂಸ್ಕಾರ ಪಡೆದು ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಡಾ.ಮಲ್ಲಿಕಾ ಘಂಟಿ ಹೇಳಿ ದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗದ್ದನಕೇರಿ ಮಳಿಯಪ್ಪಯ್ಯ ಶಿಕ್ಷಣ ಮಹಾವಿದ್ಯಾಲಯದ  ಆಶ್ರಯ ದಲ್ಲಿ ನಡೆದ ಕನ್ನಡ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಗತ್ತನ್ನು ಅರಿಯಲು ಮಾತೃ ಭಾಷೆಯೇ ಮೂಲ. ಗ್ರಾಮೀಣ ಪರಿಸರದ ವಿದ್ಯಾರ್ಥಿಗಳು ಮಾತೃಭಾಷೆ ಯಾದ ಕನ್ನಡವನ್ನು ಹೆಚ್ಚು ಹೆಚ್ಚು ಮಾತನಾಡುವ ಮೂಲಕ ಬೆಳೆಸಬೇಕು ಎಂದರು.ಸಂಸ್ಥೆಯ ಅಧ್ಯಕ್ಷ ಬಲರಾಮ ನಾಯಕ ಮಾತನಾಡಿ, ಪರಭಾಷೆಗೆ ವಿದ್ಯಾರ್ಥಿಗಳು ಮಾರು ಹೋಗದೇ ಕನ್ನಡ ಭಾಷೆಯ ಶಕ್ತಿ-ಸಾಮಾರ್ಥ್ಯ ವನ್ನು ಅರಿಯಬೇಕು. ಕನ್ನಡಾಂಬೆಯ ಋಣ ತೀರಿಸಬೇಕು. ಕನ್ನಡದ ಬಗ್ಗೆ ಪ್ರೀತಿ  ಬೆಳೆಸಿಕೊಳ್ಳಬೇಕು ಎಂದರು.`ಕೀರ್ತನೆಗಳಲ್ಲಿ ಸಾಂಸ್ಕೃತಿಕ ನೆಲೆ ಗಟ್ಟು~ ಎಂಬ ವಿಷಯದ ಕುರಿತು ಡಾ.ವೆಂಕಟಗಿರಿ ದಳವಾಯಿ ಮಾತನಾ ಡಿದರು. ಶಾಂತಾ ನಾಯಕ, ಎ.ಎಚ್.ನಿಶಾನದಾರ, ದೊಡ್ಡಣ್ಣ ಗದ್ದನ ಕೇರಿ, ಎಸ್.ಜಿ.ಖೋತ, ಕೆ. ಐ.ವಸ್ತಾದ, ಸಂಗಾಪೂರ, ಎಚ್.ಪಿ.ರಾಠೋಡ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry