ಬದ್ಧತೆಗೆ ಹೆಸರಾಗಿದ್ದ ಆಚಾರ್ಯ

7

ಬದ್ಧತೆಗೆ ಹೆಸರಾಗಿದ್ದ ಆಚಾರ್ಯ

Published:
Updated:

ಚಿಕ್ಕಬಳ್ಳಾಪುರ: `ಶ್ರದ್ಧೆ, ಪ್ರಾಮಾ ಣಿ ಕತೆಯನ್ನೇ ಜೀವಾಳವಾಗಿಸಿ ಕೊಂಡಿದ್ದ ಡಾ.ವಿ.ಎಸ್.ಆಚಾರ್ಯ ಶಾಶ್ವತ ಸ್ಮರಣೀಯ ವ್ಯಕ್ತಿ~ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕನ ಹಳ್ಳಿ ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಡಾ.ವಿ.ಎಸ್.ಆಚಾರ್ಯ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, `ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಆಚಾರ್ಯ ಅವರು ಇತರರಲ್ಲೂ ಕರ್ತವ್ಯ ಪ್ರಜ್ಞೆ ಮೂಡಿಸುತ್ತಿದ್ದರು. ನಿಷ್ಠೆ, ಬದ್ಧತೆ ಕಾಯ್ದುಕೊಳ್ಳುವಂತೆ ತಿಳಿ ಹೇಳುತ್ತಿದ್ದರು~ ಎಂದು ಸ್ಮರಿಸಿದರು.`ಹಿಂದುಳಿದ ಪ್ರದೇಶಗಳ ಅಭಿವೃದ್ಧಿ, ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಅಪಾರ ಆಸಕ್ತಿ ತೋರುತ್ತಿದ್ದರು. ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗುತ್ತಿರಲಿಲ್ಲ. ಎಷ್ಟೇ ಕಾರ್ಯ ಒತ್ತಡವಿದ್ದರೂ ಕೈಗೊಂಡ ಕೆಲಸವನ್ನು ಪೂರ್ಣಗೊಳಿಸಿ ಮುಂದಿನ ಕಾರ್ಯದತ್ತ ಗಮನ ಹರಿಸುತ್ತಿದ್ದರು~ ಎಂದರು.ಬಿಜೆಪಿ ಮುಖಂಡ ಅಗಲಗುರ್ಕಿ ಚಂದ್ರಶೇಖರ್ ಮಾತನಾಡಿ, `ರಾಜಕೀಯ ಕ್ಷೇತ್ರದಲ್ಲಿದ್ದರೂ ಪರಿಶುದ್ಧ ವ್ಯಕ್ತಿತ್ವ ಹೇಗೆ ಕಾಯ್ದುಕೊಳ್ಳಬೇಕು. ವಿವಾದಕ್ಕೆ ಸಿಲುಕದಂತೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದರು~ ಎಂದು ತಿಳಿಸಿದರು.ಬಿಜೆಪಿ ಮುಖಂಡರಾದ ಡಾ.ಮಂಜುನಾಥ್, ಚಿಕ್ಕರಾಮಯ್ಯ, ಸಿ.ಎಸ್.ವೆಂಕಟರಾಮ, ನಂದಿ  ಸುರೇಶ್, ಸುಜಾತಾ ಭೂಷಣ್, ಪ್ರೇಮಲೀಲಾ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry