ಗುರುವಾರ , ಮೇ 13, 2021
24 °C

ಬದ್ಧತೆ, ಯಶಸ್ಸಿನ ಜತೆ ತರಬೇತಿ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಉತ್ತಮ ತರಬೇತಿಯಿಲ್ಲದೆ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಮೆಕಾನಿಕಲ್ ವಿಭಾಗದ ಹಿರಿಯ ತಂತ್ರಜ್ಞ ಮತ್ತು ತರಬೇತುದಾರ ರಾಜೇಶ ಅವಲಕ್ಕಿ ಅಭಿಪ್ರಾಯಪಟ್ಟರು.ನಗರದ ಸ್ಕೌಟ್ ಭವನದಲ್ಲಿ ಭಾನುವಾರ ಮೈಸೂರು ಎಜುಕೇಷನ್ ಅಕಾಡೆಮಿ ಹಮ್ಮಿಕೊಂಡಿದ್ದ ಐಎಎಸ್ ಹಾಗೂ ಕೆಎಎಸ್ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬದ್ಧತೆ ಮತ್ತು ಯಶಸ್ಸು ಎಷ್ಟು ಮುಖ್ಯವೋ, ಹಾಗೆಯೇ ಒಳ್ಳೆಯ ತರಬೇತಿಯು ಮುಖ್ಯ. ಒಳ್ಳೆಯ ತರಬೇತಿಯನ್ನು ಪಡೆಯದೆ ಹೋದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಖರವಾಗಿ ಎದುರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜಿಲ್ಲಾಮಟ್ಟದಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ತೆರೆಯುವ ಅವಶ್ಯಕತೆ ಇದೆ ಎಂದರು.ಬಹುತೇಕ ತರಬೇತಿ ಕೇಂದ್ರಗಳು ಬೆಂಗಳೂರು, ಮೈಸೂರು, ನವದೆಹಲಿ, ಚೆನ್ನೈ ಹಾಗೂ ಹೈದರಾಬಾದ್ ಕೇಂದ್ರೀಕತವಾಗಿವೆ. ಅದನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲೂ ತರಬೇತಿ ಕೇಂದ್ರಗಳು ಆರಂಭವಾಗಬೇಕಾಗಿದೆ ಎಂದರು.ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ದೀರ್ಘ ಕಾಲದ ಬದ್ಧತೆ ಬೇಕಾಗುತ್ತದೆ. ಪ್ರತಿ ದಿನವೂ ಆತ ಸಮಕಾಲೀನ ಪ್ರಪಂಚವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.ಅದಕ್ಕಾಗಿ ಆತ ಮಾಹಿತಿ ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಇದೆಲ್ಲವೂ ಆತನಿಗೆ ಸಾಧ್ಯವಾಗುವುದಾದರೆ ಸುಲಭವಾಗಿ ಐಎಎಸ್‌ನಂತಹ ಪರೀಕ್ಷೆಗಳನ್ನು ಎದುರಿಸಬಹುದು ಎಂದರು.ಮೈಸೂರು ಎಜುಕೇಷನ್ ಅಕಾಡೆಮಿ ನಿರ್ದೇಶಕ ರವಿಚಂದ್ರ, ಮುಖ್ಯ ತರಬೇತುದಾರ ಹಾಗೂ ನಿರ್ದೇಶಕ ಹೆಗ್ಗೆರೆ ರೇಣುಕಾರಾಧ್ಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.