ಬನಶಂಕರಿ ಜಾತ್ರೆ: ಮಧ್ಯರಾತ್ರಿ ರಥೋತ್ಸವ

7

ಬನಶಂಕರಿ ಜಾತ್ರೆ: ಮಧ್ಯರಾತ್ರಿ ರಥೋತ್ಸವ

Published:
Updated:
ಬನಶಂಕರಿ ಜಾತ್ರೆ: ಮಧ್ಯರಾತ್ರಿ ರಥೋತ್ಸವ

ಬಸವಕಲ್ಯಾಣ: ಇಲ್ಲಿನ ಜಗನ್ಮಾತೆ ಬನಶಂಕರಿ ದೇವಸ್ಥಾನದ ಜಾತ್ರೆ ಅಂಗವಾಗಿ ಭಾನುವಾರ ಮಧ್ಯರಾತ್ರಿ ರಥೋತ್ಸವ ನಡೆಯಿತು. ಅನೇಕ ಜನರು ಭಕ್ತಿಭಾವದಿಂದ ಪಾಲ್ಗೊಂಡು ರಥದ ಮೇಲೆ ಬಾಳೆಹಣ್ಣು, ನಾಣ್ಯ ಇತ್ಯಾದಿ ಎಸೆದು ಜಯಘೋಷ ಹಾಕಿದರು.

ಕೆಜೆಪಿ ಮುಖಂಡ ಲಿಂಗರಾಜ ಪಾಟೀಲ ಅಟ್ಟೂರ್ ರಥೋತ್ಸವಕ್ಕೆ ಚಾಲನೆ ಕೊಟ್ಟರು.

ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಭುರಳೆ, ಪ್ರಮುಖ ಬಸವರಾಜ ತೊಂಡಾರೆ, ಧೂಳಪ್ಪ ಸುಂಟನೂರೆ, ರಾಮಚಂದ್ರ ಹುಡಗೆ, ದಿಲೀಪ ರುಮ್ಮಾ, ಬಸವರಾಜ ಧನ್ನೂರೆ, ಬಸವರಾಜ ಹಾವಗುಂಡೆ, ಸುರೇಶ ಅಡಕೆ, ಬಾಬು ಹೆಗ್ಗೆ, ಕಲ್ಲಪ್ಪ ಧನ್ನೂರೆ, ಚಂದ್ರಕಾಂತ ಪಾಟೀಲ, ಅಶೋಕ ಹಿಪ್ಪರ್ಗೆ, ಮಹೇಶ ಸುಂಟನೂರೆ, ಶಿವಶಂಕರ ಬ್ಯಾಡಗೆ, ಶಿವಶರಣಪ್ಪ ಅಕ್ಕಾ ಪಾಲ್ಗೊಂಡಿದ್ದರು.ಇದಕ್ಕೂ ಮೊದಲು ಮಧ್ಯಾಹ್ನ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಮುಖಂಡ ಶಿವಶರಣ ಬಿರಾದಾರ ಪೂಜೆ ಸಲ್ಲಿಸಿ ಚಾಲನೆ ಕೊಟ್ಟರು. ಬ್ಯಾಂಡಬಾಜಾದೊಂದಿಗೆ ಆರತಿ, ಛತ್ರಿಗಳನ್ನು ಹಿಡಿದು, ಭಜನೆ ಮಾಡುತ್ತ ನಗರಪ್ರದಕ್ಷಿಣೆ ಹಾಕಲಾಯಿತು.

ಜಾತ್ರೆ ನಿಮಿತ್ತ ಒಂದು ವಾರದವರೆಗೆ ಕೀರ್ತನ ಕೇಸರಿ ಶರಣಕುಮಾರ ಶಾಸ್ತ್ರೀ ಹಿತ್ತಲಶಿರೂರ ಮತ್ತು ವೀರಯ್ಯ ಸ್ವಾಮಿ ಗಡಿ ಲಿಂಗದಳ್ಳಿ ಪ್ರವಚನ ಹೇಳಿದರು. ಪ್ರತಿದಿನ ಸಂಜೆ ನಡೆದ ಪ್ರವಚನದ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಎಂ.ಜಿ.ಮುಳೆ, ಮುಖಂಡರಾದ ಪ್ರಕಾಶ ಪಾಟೀಲ, ಸಂಜಯ ಪಟವಾರಿ, ಆನಂದ ದೇವಪ್ಪ, ಶಿವರಾಜ ನರಶೆಟ್ಟಿ ಪಾಲ್ಗೊಂಡು ಮಾತನಾಡಿದರು.ಪ್ರತಿದಿನ ದೇವಿಯ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಕುಂಕುಮ ಅರ್ಚನೆ, ಕುಂಭಗಳ ಮೆರವಣಿಗೆ, ತೊಟ್ಟಿಲು ಹಾಕುವ ವಿಶೇಷ ಕಾರ್ಯಕ್ರಮಗಳು ಸಹ ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry