ಭಾನುವಾರ, ಮಾರ್ಚ್ 7, 2021
20 °C

ಬನಶಂಕರಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಶಂಕರಿ ರಥೋತ್ಸವ

ಕೆರೂರ: ಇಲ್ಲಿನ ದೇವಾಂಗ ಸಮುದಾಯದ ಆರಾಧ್ಯ ದೇವತೆ ಬನಶಂಕರಿ ದೇವಿಯ 78ನೇ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.‘ಬನದ ಶಾಕಾಂಬರಿ ನಿನ್ನ ಪಾದುಕೆ ಶಂಭೂಕೋ... ಬನಶಂಕರಿ ಶಂಭೂಕೋ...’ ಎನ್ನುತ್ತ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಿಮಿತ್ತ ಬನಶಂಕರಿ ವಿಗ್ರಹ ಹಾಗೂ ರಥವನ್ನು ವಿಶಿಷ್ಟ ಹೂಗಳಿಂದ ಸಿಂಗರಿಸಲಾಗಿತ್ತು.ರಥೋತ್ಸವ ಹಿನ್ನೆಲೆಯಲ್ಲಿ ವ್ಯಾಪಾರ­–­ವಹಿವಾಟು ಜೋರಾಗಿತ್ತು. ಯುವ ಧುರೀಣ ಬಸವರಾಜ ಕುದರಿ ರಥೋ­ತ್ಸವಕ್ಕೆ 25 ಅಡಿಗೂ ಉದ್ದದ ಹೂಮಾಲೆ ಸಮರ್ಪಿಸಿದರು. ರಥೋತ್ಸವದ ನಂತರ ದೇವಸ್ಥಾನದಲ್ಲಿ ಭಕ್ತರ ದಂಡು ದರ್ಶನ ಪಡೆಯಲು ಮುಂದಾಗಿದ್ದರಿಂದ ನೂಕುನುಗ್ಗಲು ಉಂಟಾಯಿತು.ದೇವಾಂಗ ಸಮಾಜದ ಧುರೀಣ ವಿಠ್ಠಲಗೌಡ ಗೌಡರ, ಪಟ್ಟಣ ಪಂಚಾಯ್ತಿ ಸದಸ್ಯ ಪಿತಾಂಬ್ರೆಪ್ಪ ಹವೇಲಿ, ಶಿವಪ್ಪ ಹೆಬ್ಬಳ್ಳಿ, ಲಕ್ಷ್ಮಣ ಮುಗಳಿ, ಪಾಂಡಪ್ಪ ಹುಚಪರನ್ನವರ, ಗುಂಡಪ್ಪ ಬೋರಣ್ಣವರ, ಹನಮಂತಪ್ಪ ಕ್ವಾಣ್ಣೂರ, ರಾಮದುರ್ಗ, ಪರದೇಶಿ ಮತ್ತಿತರರು ನೇತೃತ್ವ ವಹಿಸಿದ್ದರು.ದೇವಿ ಪಾದಗಟ್ಟೆ ಸ್ಥಳದ ಪತ್ತಾರಕಟ್ಟೆ ಬಳಿ ಭಕ್ತರಿಗೆ ಶಿರಾ, ಉಪ್ಪಿಟ್ಟು ವಿತರಿಸಲಾಯಿತು. ರಥೋತ್ಸವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.