ಬನ್ನೇರುಘಟ್ಟಕ್ಕೆ ಕ್ರಿಕೆಟಿಗ ಹರಭಜನ್ ಭೇಟಿ

7

ಬನ್ನೇರುಘಟ್ಟಕ್ಕೆ ಕ್ರಿಕೆಟಿಗ ಹರಭಜನ್ ಭೇಟಿ

Published:
Updated:

ಆನೇಕಲ್: ಖ್ಯಾತ ಅಂತರರಾಷ್ಟ್ರೀಯ ಕ್ರಿಕೆಟ್‌ಪಟು ಹರಭಜನ್ ಸಿಂಗ್ ಗುರುವಾರ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದ್ದರು.   ಮಧ್ಯಾಹ್ನದ ವೇಳೆಗೆ ಉದ್ಯಾನಕ್ಕೆ ಆಗಮಿಸಿದ ಅವರು ಸಂಜೆ 5ಗಂಟೆಯವರೆಗೂ ಸುತ್ತಾಡಿದರು. ಉದ್ಯಾನದ ಸಫಾರಿ, ಚಿಟ್ಟೆ ಪಾರ್ಕ್ ಮತ್ತು ಮೃಗಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಾಣಿಗಳನ್ನು ವೀಕ್ಷಿಸಿ ಆನಂದಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೈಗೊಂಡ ಪ್ರಾಣಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಹರಭಜನ್ ತಿಳಿಸಿದರೆಂದು ಉದ್ಯಾನವನದ ಕಾರ್ಯನಿರ್ವಾಹಕ ಡಾ.ಆರ್.ರಾಜು ಹೇಳಿದರು.       

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry