ಶುಕ್ರವಾರ, ನವೆಂಬರ್ 15, 2019
21 °C

ಬನ್ನೇರುಘಟ್ಟದಲ್ಲಿ ನೀರಾನೆ ಮರಿ ಸಾವು

Published:
Updated:

ಆನೇಕಲ್:ಬನ್ನೇರುಘಟ್ಟ ಜೈವಿಕ ಉದ್ಯಾನದ ನೀರಾನೆ ಕಾವೇರಿಗೆ ಬುಧವಾರ (ಜೂ 8) ಜನಿಸಿದ್ದ ಮರಿ ಗುರುವಾರ ಮೃತಪಟ್ಟಿದೆ.  ಮರಿ ಹಾಕಿದ ನಂತರ 24 ಗಂಟೆಗಳಾದರೂ ತಾಯಿ ಮರಿಗೆ ಹಾಲುಣಿಸದೆ ಇದ್ದುದರಿಂದ ಮೃತಪಟ್ಟಿರುವುದಾಗಿ ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.

 

ಕಾವೇರಿಗೆ ಇದು ಮೊದಲನೆ ಹೆರಿಗೆಯಾದ್ದರಿಂದ ಮರಿಯ ಆರೈಕೆ ಮಾಡುವಲ್ಲಿ ವಿಫಲವಾಗಿದೆ.ಉದ್ಯಾನ ವೈದ್ಯರು ಮರಿಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರೂ ತಾಯಿಯೇ ಸ್ಪಂದಿಸದಿದ್ದ ರಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಆರ್.ರಾಜು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)