ಬನ್ನೇರುಘಟ್ಟ: ಅಸ್ವಸ್ಥ ಆನೆ ಮರಿಯ ಸಾವು
ಆನೇಕಲ್: ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಅರಣ್ಯ ವಿಭಾಗದ ವ್ಯಾಪ್ತಿಯ ಹನೂರು ಅರಣ್ಯ ಪ್ರದೇಶದಿಂದ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತರಲಾಗಿದ್ದ ಆನೆ ಮರಿ ಶುಕ್ರವಾರ ಸಾವನ್ನಪ್ಪಿದೆ.
ಚಾಮರಾಜನಗರ ಜಿಲ್ಲೆಯ ಮಹಾಲಿಂಗನಕಟ್ಟೆ ಎಂಬ ಗ್ರಾಮಕ್ಕೆ ದನಕರುಗಳ ಜೊತೆ ದಾರಿ ತಪ್ಪಿ ಬಂದಿದ್ದ ಸುಮಾರು 3 ತಿಂಗಳು ವಯಸ್ಸಿನ ತಬ್ಬಲಿ ಆನೆ ಮರಿಯನ್ನು ಸ್ಥಳೀಯ ಅರಣ್ಯಾಧಿಕಾರಿಗಳು ರಕ್ಷಿಸಿ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಗುರುವಾರ ತಂದಿಟ್ಟಿದ್ದರು.
ಎಳೆವಯಸ್ಸಿನಲ್ಲೆಯೇ ತಾಯಿಯಿಂದ ಬೇರ್ಪಟ್ಟಿದ್ದ ಈ ಆನೆ ಮರಿಯು ತೀವ್ರ ನಿತ್ರಾಣ ಸ್ಥಿತಿ ತಲುಪಿತ್ತು.
ಆ ಕಾರಣ ಇಲ್ಲಿಯೇ ಆರೈಕೆ ಮಾಡಲಾಗುತ್ತಿತ್ತು.
`ಆನೆಮರಿಯ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿದ ಪರಿಣಾಮ ಶುಕ್ರವಾರ ಮೃತಪಟ್ಟಿದೆ~ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಆರ್. ರಾಜು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.