ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭಾರಿ ಪ್ರವಾಸಿಗರು

7

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಭಾರಿ ಪ್ರವಾಸಿಗರು

Published:
Updated:

ಬೆಂಗಳೂರು: ಕ್ರಿಸ್‌ಮಸ್ ದಿನವಾದ ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಎಂಟು ಸಾವಿರ ಜನರು ಭೇಟಿ ನೀಡಿದ್ದಾರೆ. ಸಾಮಾನ್ಯವಾಗಿ ಮಂಗಳವಾರ ಉದ್ಯಾನಕ್ಕೆ ರಜೆ ಇರುತ್ತದೆ. ಆದರೆ ಹೆಚ್ಚಿನ ಜನರ ಆಗಮನದ ನಿರೀಕ್ಷೆ ಇದ್ದುದರಿಂದ ಮಂಗಳವಾರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿತ್ತು.ಮಂಗಳವಾರ ಒಂದೇ ದಿನದ ಟಿಕೆಟ್ ಮಾರಾಟದಿಂದ 8 ಲಕ್ಷ ರೂಪಾಯಿ ಆದಾಯ ಬಂದಿದೆ. ಹೊಸ ವರ್ಷವೂ ಮಂಗಳವಾರದ ದಿನವೇ ಬಂದಿರುವುದರಿಂದ ಜನವರಿ ಒಂದರಂದು ಕೂಡಾ ಉದ್ಯಾನ ತೆರೆದಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry