ಬುಧವಾರ, ಮೇ 12, 2021
17 °C
ರೈಲ್ವೆ ಮಂಡಳಿ ಸದಸ್ಯತ್ವ ನೇಮಕಾತಿ ಹಗರಣ

ಬನ್ಸಲ್ ವಿಚಾರಣೆಗೆ ಸಿಬಿಐ ಸನ್ನದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರೈಲ್ವೆ ಇಲಾಖೆಯಲ್ಲಿನ ಇತ್ತೀಚಿನ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸಿದ ತರುವಾಯ ಸಿಬಿಐ ಇದೀಗ ಇಲಾಖೆಯ ಮಾಜಿ ಸಚಿವ ಪವನ್‌ಕುಮಾರ್ ಬನ್ಸಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದೇ ವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ.ಸದ್ಯ ಅಮಾನತಿನಲ್ಲಿರುವ ರೈಲ್ವೆ ಮಂಡಳಿ ಸದಸ್ಯ ಮಹೇಶ್ ಕುಮಾರ್ ಅವರ ನೇಮಕಕ್ಕೆ ಸಂಬಂಧಿಸಿದಂತೆ ಬನ್ಸಲ್ ಅಳಿಯ ವಿಜಯ್ ಸಿಂಗ್ಲಾ ರೂ 90 ಲಕ್ಷ ಲಂಚ ಪಡೆಯುತ್ತಿರುವಾಗ ಸಿಕ್ಕಿಬಿದ್ದ ಘಟನೆಯ ಹಿನ್ನೆಲೆಯಲ್ಲಿ ಸಿಬಿಐ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.ಬನ್ಸಲ್ ಅಧಿಕೃತ ನಿವಾಸದಿಂದಲೇ ಅವರ ಅಳಿಯ ಲಂಚ ವ್ಯವಹಾರ ನಿರ್ವಹಿಸುತ್ತಿರುವ ಪ್ರಕರಣ ಬಯಲಿಗೆ ಬಂದ ನಂತರ ಬನ್ಸಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸರ್ಕಾರದ ಕಾರ್ಯದರ್ಶಿ ಸ್ಥಾನಕ್ಕೆ ಸರಿಸಮನಾದ ರೈಲ್ವೆ ಮಂಡಳಿ ಸದಸ್ಯರ ನೇಮಕದಲ್ಲಿ ತಾವು ತಪ್ಪೆಸಗಿಲ್ಲ ಎಂದು ಬನ್ಸಲ್ ತಮ್ಮನ್ನು ಸಮರ್ಥಿಸಿಕೊಂಡಿದ್ದರಾದರೂ ನೇಮಕಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಕಲೆ ಹಾಕುವ ಮೂಲಕ ಹಾಗೂ ಮಹೇಶ್ ಕುಮಾರ್, ವಿಜಯ್ ಸಿಂಗ್ಲಾ, ಖಾಸಗಿ ಕಾರ್ಯದರ್ಶಿ ರಾಹುಲ್ ಭಂಡಾರಿ ಹೇಳಿಕೆಗಳನ್ನು ಧ್ವನಿಮುದ್ರಿಸಿಕೊಳ್ಳುವ ಮೂಲಕ ಸಿಬಿಐ ಪ್ರಕರಣಕ್ಕೆ ಜೀವ ತುಂಬಿತ್ತು. ಮಹೇಶ್ ಕುಮಾರ್ ಅವರೊಂದಿಗೆ ಬನ್ಸಲ್ ಏ.16ರಂದು ಮುಂಬೈನಲ್ಲಿ ಮಾತುಕತೆ ಬಗ್ಗೆಯೂ ಸಿಬಿಐ ದಾಖಲೆ ಸಂಗ್ರಹಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.