ಬಬ್ರುವಾಹನ ಯಕ್ಷಗಾನ ವೈಭವ

ಬುಧವಾರ, ಜೂಲೈ 17, 2019
26 °C

ಬಬ್ರುವಾಹನ ಯಕ್ಷಗಾನ ವೈಭವ

Published:
Updated:

ನಾಗರಬಾವಿಯಲ್ಲಿರುವ ಕೆನರಾ ಬ್ಯಾಂಕ್ ಕಾಲೊನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ 24ನೇ ವಾರ್ಷಿಕೋತ್ಸವ ಪ್ರಯುಕ್ತ ಇತ್ತೀಚೆಗೆ ಬ್ರಹ್ಮ ಕಲಶೋತ್ಸವ ಹಾಗೂ ಕುಂಭಾಭಿಷೇಕ ಮಹೋತ್ಸವ ನಡೆಯಿತು. ಇದರ ಅಂಗವಾಗಿ ಮೂರು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಮೊದಲನೇ ದಿನ ಬೇಗಾರು ಶಿವಕುಮಾರ್ ಅವರ ನಿರ್ದೇಶನದಲ್ಲಿ ಗಾನ ಸೌರಭ ಕಲಾಶಾಲೆ ತಂಡದಿಂದ `ವೀರ ಬಬ್ರುವಾಹನ~ ಯಕ್ಷಗಾನ ಪ್ರದರ್ಶನ, ಎರಡನೇ ದಿನ ವಿದ್ಯಾಭೂಷಣ ಅವರಿಂದ ನಡೆದ `ಭಕ್ತಿ ರಸ ಸಂಜೆ~  ಕಾರ್ಯಕ್ರಮ ಭಕ್ತರನ್ನು ರಂಜಿಸಿತು.ಮೂರನೇ ದಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ಕಲಶಾಭಿಷೇಕ ಕಾರ್ಯಕ್ರಮ ನಡೆಯಿತು. ಜೊತೆಗೆ ಎಂ.ಎ. ಜಯರಾಮ್ ಅವರಿಂದ ಕುಂಭಾಭಿಷೇಕ ಮಹತ್ವ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry