ಬುಧವಾರ, ಮೇ 12, 2021
19 °C

ಬಯಲು ಬಂಧೀಕಾನೆ: ಕಾನೂನು ಅರಿವು ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: `ಜನಸಾಮಾನ್ಯರಲ್ಲಿ ಕಾನೂನಿನ ಅರಿವಿನ ಕೊರತೆಯಿರುವುದರಿಂದ ಅಪರಾಧಗಳು ಹೆಚ್ಚುತ್ತಿವೆ~ ಎಂದು ದೇವನಹಳ್ಳಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್.ಎ.ಶೆಟ್ಟರ್ ಅಭಿಮತ ವ್ಯಕ್ತಪಡಿಸಿದರು.ಇಲ್ಲಿಗೆ ಸಮೀಪದ ಕೋರಮಂಗಲ ಬಯಲು ಬಂಧೀಖಾನೆಯ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಕಾನೂನು ರಥಯಾತ್ರೆಯಡಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿರಿಯ ಸಿವಿಲ್ ನ್ಯಾಯಾಧೀಶ ಜಿ.ಆರ್.ಶೆಟ್ಟರ್, ವಕೀಲರ ಸಂಘದ ಉಪಾಧ್ಯಕ್ಷ ಆರ್.ಕೇಶವಮೂರ್ತಿ, ಕಾರ್ಯದರ್ಶಿ ಮುನಿರಾಜು, ಖಜಾಂಚಿ ಸಿ.ವೆಂಕಟೇಶ್, ಸರ್ಕಾರಿ ಅಭಿಯೋಜಕ ಗಣಪತಿಭಟ್, ಬಯಲು ಬಂಧೀಖಾನೆಯ ಅಧೀಕ್ಷಕ ಬಿ.ಟಿ.ಓಬಳೇಶಪ್ಪ, ಜೈಲರ್ ಕೆ.ಟಿ.ಚಿಕ್ಕತಿಮ್ಮಯ್ಯ, ಕೈದಿಗಳು, ಬಂಧೀಖಾನೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ನಂತರ ಕೈದಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಚಂದ್ರಶೇಖರ್, ಕರಿಯಯ್ಯ, ಹುಚ್ಚಪ್ಪ, ಎನ್.ಪಿ.ರಮೇಶ್ ಭಾಗವಹಿಸಿದ್ದರು. ವಕೀಲೆ ಎಚ್.ವಿ.ರಾಧಾಮಣಿ, ಉಮ್ಮೆ ಆಸ್ಮಾ ಅವರು ವಿವಿಧ ಕಾನೂನು ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಓಬಳೇಶ್ ಸ್ವಾಗತಿಸಿದರು. ಪದ್ಮನಾಭ ವಂದಿಸಿದರು.ವಿಜಯಪುರದ ವಿದ್ಯಾದ್ರಿ ಪದವಿಪೂರ್ವ ಕಾಲೇಜು, ಆವತಿಯ ಸರ್ಕಾರಿ ಶಾಲೆಗಳಲ್ಲಿಯೂ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.