ಬಯಲು ವೇದಿಕೆಯನ್ನು ರಕ್ಷಿಸಿ

7

ಬಯಲು ವೇದಿಕೆಯನ್ನು ರಕ್ಷಿಸಿ

Published:
Updated:

ರಾಜಾಜಿನಗರ ರಾಮಮಂದಿರ ಪಕ್ಕದಲ್ಲಿರುವ ಆಟದ ಮೈದಾನದ ಬಯಲು ಮಂಟಪವು ಕಳೆದ ವರ್ಷ ಉದ್ಘಾಟನೆಯಾಗಿದ್ದು, ಸುತ್ತಮುತ್ತಲಿನ ವಾಸಿಸುವ ಜನತೆಗೆ ಸಂತೋಷದ ಸಂಗತಿಯಾಗಿದೆ. ಆದರೆ, ಇಲ್ಲಿನ ವೇದಿಕೆಯು ನೋಡಿಕೊಳ್ಳಲು ಯಾರೂ ಇಲ್ಲದೆ ಅನಾಥವಾಗಿದೆ. ಈ ಸ್ಥಳದಲ್ಲಿ ಸಂಬಂಧಪಟ್ಟ ವ್ಯವಹಾರಕ್ಕೆ ಯಾವ ಕಚೇರಿಯೂ ಇಲ್ಲ. ವೇದಿಕೆಯ ಸುತ್ತಲೂ ಇರುವ ಗೋಡೆಯ ಮೇಲೆ ಉಗುಳಿ ಉಗುಳಿ, ಗಲೀಜಾಗಿದೆ. ಈ ವೇದಿಕೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದೆ. ಇಲ್ಲಿಗೆ ಒಬ್ಬ ಕಾವಲುಗಾರನನ್ನು ನೇಮಿಸಬೇಕು. ವೇದಿಕೆಯ ಹಿಂಭಾಗದ ಮತ್ತು ಮುಂಭಾಗದಲ್ಲಿ ಗೇಟುಗಳನ್ನು ನಿರ್ಮಿಸಿ ಈ ವೇದಿಕೆಯ ಸುತ್ತಲೂ ಕಬ್ಬಿಣದ ತಂತಿಯನ್ನು ನಿರ್ಮಿಸಿ ರಕ್ಷಿಸಬೇಕಾಗಿ ಕೋರಲಾಗಿದೆ. ಸಂಬಂಧಪಟ್ಟ ನಗರಸಭಾ ಸದಸ್ಯರು ಹಾಗೂ ಶಾಸಕರು ಕೂಡಲೇ ಗಮನಹರಿಸಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry