ಗುರುವಾರ , ಮೇ 6, 2021
33 °C

ಬಯಲು ಶೌಚಾಲಯ ತಪ್ಪಲು 10 ವರ್ಷ - ಜೈರಾಂ ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ರಾಷ್ಟ್ರದ ಗ್ರಾಮೀಣ ಪ್ರದೇಶಗಳು ಇನ್ನು 10 ವರ್ಷದೊಳಗೆ ಬಯಲು ಮಲ ವಿಸರ್ಜನೆಯಿಂದ ಮುಕ್ತವಾಗುತ್ತವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಅವರು ಹೇಳಿದ್ದಾರೆ.ಇಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡಿದ್ದ ಅವರು, ರಾಷ್ಟ್ರದ ಎಲ್ಲ 2.65 ಲಕ್ಷ ಗ್ರಾಮ ಪಂಚಾಯಿತಿಗಳು ಇನ್ನು 10 ವರ್ಷಗಳಲ್ಲಿ ಬಯಲು ಮಲ ವಿಸರ್ಜನೆಯಿಂದ ಮುಕ್ತವಾಗುತ್ತವೆ ಎಂದರು.ನಿರ್ಮಲ್ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಕೇವಲ ಶೌಚಾಲಯ ನಿರ್ಮಾಣ ಯೋಜನೆ ಎಂದು ಪರಿಗಣಿಸಬಾರದು. ಅದಕ್ಕಿಂತ ಹೆಚ್ಚಿನ ವ್ಯಾಪ್ತಿ ಈ ಯೋಜನೆಗೆ ಇದೆ. ಮಹಿಳೆಯರ ಖಾಸಗಿತನ, ಭದ್ರತೆ ಮತ್ತು ಘನತೆಯನ್ನು ಸಂರಕ್ಷಿಸುವುದು  ಯೋಜನೆಯ ಉದ್ದೇಶ ಎಂದ ಅವರು, ಈ ಅಭಿಯಾನಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದು ಭರವಸೆ ನೀಡಿದರು.ಈ ಹಿಂದೆ ರಾಷ್ಟ್ರದಲ್ಲಿ ಹಮ್ಮಿಕೊಂಡಿದ್ದ ಶೌಚಾಲಯ ನಿರ್ಮಾಣ ಯೋಜನೆಗಳು ಅರೆಮನಸ್ಸಿನ  ಯೋಜನೆಗಳಾಗಿದ್ದವು. ಮಹಾರಾಷ್ಟ್ರದಲ್ಲಿ ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹೀಗಾಗಿ ಅಲ್ಲಿ ಪ್ರತಿ ಮೂರರಲ್ಲಿ ಒಂದು ಗ್ರಾಮ ಪಂಚಾಯಿತಿ ಬಯಲು ಮಲ ವಿಸರ್ಜನೆಯಿಂದ ಮುಕ್ತವಾಗಿದೆ ಎಂದರು.ಆದರೆ, ಪುರುಷ ಪ್ರಧಾನ ರಾಜ್ಯವಾದ ಹರಿಯಾಣ ಕೂಡ ಈಗ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿದೆ. `ಶೌಚಾಲಯ ಇಲ್ಲದಿದ್ದರೆ ವಧು ನೀಡುವುದಿಲ್ಲ~ ಎಂಬ ಘೋಷಣೆಯಡಿ ಆ ರಾಜ್ಯಅಭಿಯಾನ ಹಮ್ಮಿಕೊಂಡಿದೆ ಎಂದು ಜೈರಾಂ ರಮೇಶ್ ಹೇಳಿದರು.2011 ಜನಗಣತಿ ಪ್ರಕಾರ, ಗ್ರಾಮೀಣ ಪ್ರದೇಶದ ಶೇ 60ರಷ್ಟು ಮನೆಗಳಲ್ಲಿ ಸೂಕ್ತ ಶೌಚಾಲಯ ಸೌಲಭ್ಯ ಇಲ್ಲ ಎಂದ ಅವರು, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶಗಳು  ಕೂಡ ಶೌಚಾಲಯ ನಿರ್ಮಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.